Story of Juliane koepcke
ಯಾರಾದರೂ ವಿಮಾನದಿಂದ ಪ್ಯಾರಶೂಟ್ ಇಲ್ಲದೆ ಹಾರಿದರೆ ಅವರು ಸಾಯುವುದು ನಿಸ್ಸಂಶಯ. ಆದರೆ ಹಾರಾಡುತ್ತಿರುವ ವಿಮಾನದಿಂದ 10000 ಅಡಿ ಎತ್ತರದಿಂದ ಅಮೆಜಾನ್ ಕಾಡಿನ ಒಳಗೆ ಬಿದ್ದು ಅಲ್ಲಿನ ವನ್ಯ ಜೀವಿಗಳ ಎಡೆಯಿಂದ ಬದುಕಿಬಂದ ಕ್ಲಿಯರ್ ಆಗಿ ಹೇಳ್ಬೇಕು ಅಂದ್ರೆ ಸಾವನ್ನೇ ಜೈಸಿ ಬಂದ ಕೇವಲ 17 ವರ್ಷ ಪ್ರಾಯ ಇರುವ juliane koepcke ಎಂಬ ಹುಡುಗಿಯ ಅತಿಸಾಹಸ ಕಥೆಯನ್ನಾಗಿದೆ ಇಂದು ಇಲ್ಲಿ ತಿಲಿಸಲಿರುವುದು.ಬಹಳ ಆಸಕ್ತಿಕರವಾಗಿದೆ . ಪೂರ್ತಿಯಾಗಿ ಓದಿ.
1971 ಡಿಸೆಂಬರ್ 24 ರಂದು ತನ್ನ ಹೈಸ್ಕೂಲ್ ವಿದ್ಯಬ್ಯಾಸ ಮುಗಿಸಿ ತನ್ನ ತಾಯಿಯ ಜೊತೆ ಪೆರುವಿನ ಲಿಮ ಎಂಬ ಸ್ಥಳದಿಂದ ತನ್ನ ತಂದೆಯ ಬಳಿ ಯಾತ್ರೆ ಮಾಡುವುದಾಗಿತ್ತು juliane koepcke ಎಂಬ 17 ವರ್ಷ ಪ್ರಾಯದ ಹೆಣ್ಣು. ಅವರು ಆರಿಸಿದ ಏರ್ಲೈನ್ಸ್ ಅಂದರೆ ವಿಮಾನಕ್ಕೆ ಹಲವಾರು ಅಪಗಾತಗಳಾಗಿತ್ತು.ಆದರಿಂದಲೆ ಅವಳ ತಂಡ ತಾಯಿಯಲ್ಲಿ ಮುನ್ನೆಚ್ಚರಿಕೆ ನೀಡಿದ್ದರು.ಯಾವುದೇ ಕಾರಣಕ್ಕೂ ಆ ವಿಮಾನದಲ್ಲಿ ticket ತೆಗೆದುಕೊಳ್ಳಬೇಡಿ ಎಂದು.ಆದರೆ ಆ ಹೊತ್ತಿಗೆ ಆಗಲೇ ಟಿಕೆಟ್ ತೇಕೊಂಡಗಿತ್ತು.
ಅವರುಹೇಳಿದ ಸಮಯಕ್ಕಿಂತ ಬಹಳಷ್ಟು ಲೇಟ್ ಆಗಿತ್ತು ವಿಮಾನ ಟೇಕಾಫ್ ಆಗುವಾಗ.ಅದಕ್ಕಿರುವ ಮುಖ್ಯ ಕಾರಣ ಆ ಸಮಯದ ಕಾಲವಸ್ಥೆಯಾಗಿತ್ತು.ಅಂದು ಜೋರಾದ ಮಳೆ ಜೊತೆಗೆ ಸಿಡಿಲು ಮಿಂಚು ಕೂಡ ಇತ್ತು.ಹೇಗೋ ವಿಮಾನ ಹಾರಾಡಲು ಪ್ರಾರಂಭಿಸುತ್ತದೆ.ಅಲ್ಪ ಸಮಯದ ಬಳಿಕ ವಿಮಾನ ಅಲುಗಾಡುತ್ತದೆ.ಶೆಲ್ಫ್ ನಲ್ಲಿ ಇರುವ ಲಗೇಜ್ ಗಳೆಲ್ಲ ಕೆಳಗೆ ಬೀಳಲು ಆರಂಭಿಸುತ್ತದೆ.ವಿಮಾನ ಮುಂದೆ ಹೋದಂತೆ ಜನರೆಲ್ಲರೂ ಭಯದಿಂದ ನಡುಗುತ್ತಿರುತ್ತಾರೆ.ಏರ್ ಹೋಸ್ಟರ್ ಪ್ರಯಾಣಿಕರಿಗೆ ಸಹಾಯ ಮಾಡುವುದನ್ನು ಹೊರತುಪಡಿಸಿ ಪ್ರಾರ್ಥಿಸಲು ಕೂರುತ್ತಾರೆ.ತಕ್ಷಣ ಆ ಸಂಭವ ನಡೆಯುತ್ತದೆ.
ಒಂದು ಮಿಂಚು ಬಂದು ವಿಮಾನಕ್ಕೆ ಹೊಡೆಯುತ್ತದೆ ಮತ್ತು ವಿಮಾನ ಎರಡು ಭಾಗವಾಗಿ ಭಯಂಕರವಾದ ಅಮೆಜಾನ್ ಕಾಡಿಗೆ ಬೀಳಲು ಪ್ರಾರಂಭಿಸುತ್ತದೆ. ಅದೃಷ್ಟವಶಾತ್ juliane ಕೂತಿರುವ ಸೀಟು ಹಗ್ಗು ಅಕ್ಕಪಕ್ಕದ ಸೀಟ್ ವಿಮಾನದಿಂದ ಹಾರಿ ಹೋಗುತ್ತದೆ. ಅವಳ ಅಕ್ಕ ಪಕ್ಕ ಇದ್ದವರು ಸೀಟ್ಬೆಲ್ಟ್ ನಿಂದ ಹಾರಿ ಹೋಗುತ್ತಾರೆ.ನಿಜ ಹೇಳ್ಬೇಕು ಅಂದ್ರೆ ಅಲ್ಲಿ juliane ಅನ್ನು ರಕ್ಷಿಸಿದ್ದು ಕೂಡ ಆ ಸೀಟ್ಬೆಲ್ಟ್ ಆಗಿತ್ತು.
ಬಹಳ ವೇಗದಿಂದ ಸೀಟ್ ಜೊತೆ juliane ಕೂಡ ಕೆಳಗೆ ಬೀಳುತ್ತಿದ್ದಳು.ಅವಲ್ ಬೀಳುವಾಗ ತಲೆ ಕೆಳಗೆ ಹಾಗೂ ಕಾಲು ಮೇಳೆಯಾಗಿ ಬೀಳುತ್ತಿದ್ದಳು.ಸಾಧಾರಣವಾಗಿ ಮೇಲ್ಮೈಪದರ (surface area) ಕಡಿಮೆ ಇರುವ ವಸ್ತುವು ಬಹಳ ವೇಗವಾಗಿ ಕೆಳಗೆ ಬೀಳುತ್ತದೆ.ಆದರೆ ಮೇಲ್ಮೈಪದರ (surface area) ಹೆಚ್ಚು ಇರುವ ವಸ್ತುವು ನಿಧಾನವಾಗಿ ಕೆಳಗೆ ಬೀಳುತ್ತದೆ.ಉದಾಹರಣೆಗೆ ಒಂದು ಪೇಪರ್ ಅನ್ನು ಮಡಚದೆ ಕೆಳಗೆ ಹಾಕಿದರೆ ಅದು ನಿಧಾನವಾಗಿ ಕೆಳಗೆ ಬೀಳುತ್ತದೆ.ಅದೇ ರೀತಿಯಾದ ವಿಷಯ juliane ವಿಷಯದಲ್ಲೂ ನಡೆಯುತ್ತದೆ.ಅವಳು ಸೀಟುಗಳ ಜೊತೆ ತಲೆಕೆಳಗಾಗಿ ಬೀಳುವುದರಿಂದ ಸೀಟುಗಳ ಮೇಲ್ಮೈಪದರ (surface area) ದೊಡ್ಡದು ಆಗಿದ್ದರಿಂದ ಕೆಳಗೆ ಬೀಳುವ ವೇಗವನ್ನು ಅದು ಸ್ವಲ್ಪ ಕಡಿಮೆ ಮಾಡುತ್ತದೆ.ಅಲ್ಲದೆ ಅದೃಷ್ಟವಶತ್ ಹೊತ್ತಿಗೆ ಗಾಳಿಯು ಕೆಳಗಿನಿಂದ ಮೇಲೆ ಬರುತ್ತಿತ್ತು.ಅದು ಕೂಡ ಬೀಳುವ ವೇಗವನ್ನು ಕಡಿಮೆ ಮಾಡುತ್ತದೆ.ಅಲ್ಲದೆ ಅವಳು ಬೀಳುವುದು ಅಮೆಜಾನ್ ಎಂಬ ದಟ್ಟ ಕಾಡಿಗೆ ಆಗಿದ್ದರಿಂದ ಬೀಳುವಾಗ ಮರದ ಕೊಂಬೆಗಳು ಸಿಗುತ್ತದೆ.ಒಂದೊಂದೇ ಕೊಂಬೆಗೆ ಸೀಟು ತಾಗಿ ತಾಗಿ ಬರುವಾಗ ವೇಗ ಮತ್ತು ಕಡಿಮೆ ಆಗುತ್ತದೆ.ಕೊನೆಯ ಕೊಂಬೆಗೆ ತಾಗುವಾಗ ತಲೆ ಕೆಳಗೆ ಕಾಲು ಮೇಲೆಯಾಗಿ ಇದ್ದವಳನ್ನು ತಲೆ ಮೇಲೆ ಕಾಲು ಕೆಳಗೆ ಮಾಡಿ ಸಾಧಾರಣ ಸೀಟಿನಲ್ಲಿ ಕುಳಿತ ಹಾಗೆ ಬೀಳುತ್ತಾಳೆ.
ಕೆಳಗೆ ಬಿದ್ದ ತಕ್ಷಣ ಅವಳು ಭೋದರಹಿತಲಾಗುತ್ತಾಲೆ.ನಂತರ ಕೆಲವು ಗಂಟೆಗಳ ಬಳಿಕ ಅವಳಿಗೆ ಎಚ್ಚರವಾಗುತ್ತದೆ.ಅವಳು ತನ್ನ ಕಣ್ಣನ್ನು ತೆರೆಯಲು ಪ್ರಯತ್ನಿಸುತ್ತಾಳೆ.ಆದರೆ ಅದು ಅವಳಿಂದ ಆಗುವುದಿಲ್ಲ ಅವಳ ಒಂದು ಕಣ್ಣಿಗೆ ಬಹಳ ಪೆಟ್ಟಾಗಿತ್ತು.ಮತ್ತು ಬಲ ತೋಳು ಕೂಡ ಓಡೆದುಹೋಗಿತ್ತು.ಹೀಗೆ ಆಗಿದ್ದರಿಂದ ಅವಳಿಗೆ ಆ ಸೀಟು ಬೆಲ್ಟ್ ತೆಗೆಯಲು ಒಂದೂವರೆ ದಿವಸ ಹಿಡಿಸಿತು. ಅಷ್ಟೊಂದು ಕಷ್ಟ ಆಗಿತ್ತು ಆ ಸೀಟು ಬೆಲ್ಟ್ ತೆಗೆಯಲು. ನಂತರ ಅವಳು ಮೆಲ್ಲನೆ ಎದ್ದು ನಡೆಯುತ್ತಾಳೆ. ಅವಳು ಮೊದಲು ಹುಡುಕಿದ್ದು ತನ್ನ ತಾಯಿಯನ್ನಾಗಿತ್ತು. ಅಲ್ಲಿ ಸುತ್ತಮುತ್ತಲೂ ಹುಡುಕುತ್ತಾಳೆ. ಆದರೆ ಅವಳಿಗೆ ಅಲ್ಲಿ ಕಂಡದ್ದು ವಿಮಾನದಲ್ಲಿ ಪ್ರಯಣಿಸುತ್ತಿದ್ದ ಪ್ರಯಾಣಿಕರ ಶರೀರದ ಭಾಗಗಳಾಗಿತ್ತು. ಅವಳು ತನ್ನ ತಾಯಿಯನ್ನು ಹುಡುಕಿದರೂ ಕೂಡ ಅವಳಿಗೆ ತನ್ನ ತಾಯಿಯನ್ನು ಕಂಡುಹಿಡಿಯಲು ಆಗಲಿಲ್ಲ. ಅಷ್ಟರಲ್ಲಿ ಆಗಲೇ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಹೆಲಿಕಾಫ್ಟರ್ ಗಳ ಶಬ್ದ ಅವಳಿಗೆ ಕೇಳಿಸುತ್ತಿತ್ತು.ಆದರೆ ಅವಳನ್ನು ಯಾರು ಗಮನಿಸಲಿಲ್ಲ. ಅಷ್ಟೊಂದು ದಟ್ಟವಾಗಿತ್ತು ಅಮೆಜಾನ್ ಕಾಡು.ನಂತರ ಅವಳಲ್ಲಿ ಇದ್ದದ್ದು ಒಂದೇ ಗುರಿ ಆಗಿತ್ತು.ಅಮೆಜಾನ್ ಕಾಡನ್ನು ಬಿಟ್ಟು ಹೊರಗೆ ಹೋಗುವುದು.ಆ ಒಂದು ಸಂಧರ್ಬದಲ್ಲಿ ಅವಳ ಚಿಂತನೆಗೆ ಬಂದದ್ದು ಅಮೆಜಾನ್ ಕಾಡಿನಲ್ಲಿ ಅನ್ವೇಶಕನಾಗಿರುವ ತನ್ನ ತಂದೆಯ ಮಾತುಗಳಾಗಿತ್ತು. ಹೇಳ್ಬೇಕು ಅಂದ್ರೆ ಅನ್ವೇಶಕನಾದ ತನ್ನ ತಂದೆಯ ಮಾತುಗಳು ಹಾಗೂ ಪಕ್ಷಿ ನಿವೇಶಕಿ ಆಗಿರುವ ತನ್ನ ತಾಯಿಯ ಮತುಗಳಾಗಿತ್ತು ಅವಳನ್ನು ಆ ಕಾಡಿನಿಂದ ರಕ್ಷಿಸಿದ್ದು.
ಹಾಸ್ಪಿಟಲ್ನಲ್ಲಿ ವೈದ್ಯರು ಹೇಳುತ್ತಾರೆ. ಅವಳು ಅಂದು ಸೀಮೆ ಎಣ್ಣೆ ಉಪಯೋಗಿಸಿ ಹುಳಗಳನ್ನು ತೆಗೆಯದಿದ್ದರೆ ಅವಳ ಕೈಯ್ಯನ್ನು ಪೂರ್ತಿಯಾಗಿ ಕಟ್ ಮಾಡಬೇಕಾಗಿತ್ತು ಎಂದು. ಇನ್ನೊಂದು ಕೂಡ ಹೇಳುತ್ತಾರೆ.ಅಮೆಜಾನ್ ಕಾಡಿನಲ್ಲಿ ಇರುವ ಕಪ್ಪೆಗಳು ಅಂದರೆ ಅವಳು ಹಿಡಿಯಲೆಂದು ಹೊರಟ ಕಪ್ಪೆಯು ಹಾವಿಗಿಂತ ವಿಷ ಇರುವಂಥದ್ದು ಎಂದು. ಹೇಗಿದ್ದರೂ ಭಾಗ್ಯ ಅನ್ನೋದು juliane ವಿಷಯದಲ್ಲಿ ಸಂಭವಿಸಿದೆ.
ನಿಮಗೆ ಪೂರ್ತಿ ವಿಷಯ ತಿಳಿದಿರುತ್ತೆ ಎಂದು ಭಾವಿಸುತ್ತೇನೆ.ಏನಾದರೂ ವಿಷಯ ಇದ್ದಲ್ಲಿ ಕೆಳಗೆ comment ಮಾಡಿ ಹೇಳುತ್ತಾ ಕೊನೆಗೊಳಿಸುತ್ತೇನೆ.
ಧನ್ಯವಾದಗಳು.
Amazing 😍
ReplyDelete