ನೂರಾರು ವರ್ಷಗಳ ಕಾಲ ಮಾತ್ರ ಮಾಡಿದರೆ ಪೂರ್ತಿಯಾಗುವ ಆ ಕಟ್ಟಡವನ್ನು ಅವರು ನಿರ್ಮಿಸಿದ್ದು ಕೇವಲ 15 ವರ್ಷಗಳಲ್ಲಿ ಆಗಿತ್ತು. ಹೆಗೆಯಾಗಿರಬಹುದು ಅವರು ಅದನ್ನು ನಿರ್ಮಿಸಿದ್ದು?.ಯಾಕಾಗಿರಬಹುದು ಅವರು ಅದನ್ನು ನಿರ್ಮಿಸಿದ್ದು?.ಭೂಮಿ ಬಿಟ್ಟು ಹೊರಗಿನ ಯಾರದಾದರೂ ಸಹಾಯ ಅವರಿಗೆ ಲಭಿಸಿರಬಹುದೇ?. ಅದೇ ನಾನು ಇಂದು ನಿಮಗೆ ತಿಲಿಸಲಿರುವುದು ಪಿರಮಿಡ್ ಗಳ ನಿಗೂಡತೆ ಬಗ್ಗೆ‼️.....
ಯಾವಾಗಲೂ ಒಂದು ಅದ್ಭುತವಾಗಿದೆ ಈ ಪಿರಮಿಡ್ ಅನ್ನುವುದು.3 ರಿಂದ 5 ಟನ್ ಭಾರ ಇರುವ 25ಲಕ್ಷ ಕಲ್ಲುಗಳನ್ನು ಉಪಯೋಗಿಸಿ ಪಿರಮಿಡ್ ಗಾಳನ್ನು ನಿರ್ಮಿಸಲಾಗಿದೆ.ಆ ಕಾಲದ ತಂತ್ರಜ್ಞಾನ ಮತ್ತು ಅಂದಿನ ಜನಸಂಖ್ಯೆ ನೋಡುವ ಸಂದರ್ಭದಲ್ಲಿ ಕಡಿಮೆ ಅಂದರೆ 625ವರ್ಷ ಹಿಡಿಸುತ್ತದೆ ಒಂದು ಪಿರಮಿಡ್ ನಿರ್ಮಿಸಲು.ಆದರೆ ಈಜಿಪ್ಟ್ ನ ಜನ ಪಿರಮಿಡ್ ಅನ್ನು ನಿರ್ಮಿಸಿದ್ದು ಕೇವಲ 15 ವರ್ಷಗಳಲ್ಲಿ ಆಗಿತ್ತು.5000 ವರ್ಷಗಳ ಹಿಂದಿನಿಂದ ಆಗಿರುತ್ತದೆ ಪಿರಮಿಡ್ ಗಳ ಕಥೆ ಪ್ರಾರಂಭ.ನಾವು 6000 ವರ್ಷಗಳ ಹಿಂದಿನಿಂದಲೇ ಪ್ರಾರಂಭ ಮಾಡೋಣ.ಆ ಒಂದು ಸಮಯದಲ್ಲಿ ಮನುಷ್ಯರು ಗುಂಪಾಗಿ ಬದುಕಲು ಪ್ರಾರಂಭಿಸಿದ ಕಾಲ ಆಗಿರುವುದರಿಂದ ಅವರ ಎಡೆಯಲ್ಲಿ ವಿಶ್ವಾಸ, ಮತ, ದೇವರು, ಏನು ಇರಲಿಲ್ಲ. ಅವರಲ್ಲಿ ಇದ್ದದ್ದು ಬೇರೆ ಬೇರೆ ರೀತಿಯ ರೋಗಗಳು ಆಗಿತ್ತು. ತುಂಬಾ ರೋಗ ಇತ್ತು ಎನ್ನುವ ಕಾರಣದಿಂದಲೇ ಆ ಕಾಲದಲ್ಲಿ ಬದುಕಿದ್ದ ಜನರ ಸರಾಸರಿ ಆಯಸ್ಸು ಅನ್ನುವುದು 40 ವರ್ಷ ಮಾತ್ರವಾಗಿತ್ತು. ಈ ಒಂದು ಪ್ರಾಯ ಆದಾಗಲೇ ಜನರು ಮೆಲ್ಲನೆ ಸಾವಿಗೀಡಾಗುತ್ತಿದ್ದರು. ಆದ್ದರಿದಲೇ ಮರಣ ಅನ್ನುವುದನ್ನು ಅಷ್ಟು ದೊಡ್ಡ ವಿಷಯವಾಗಿ ಆ ಕಾಲದ ಜನ ಅಂದುಕೊಳ್ಳಲಿಲ್ಲ.ಒಂದು ವ್ಯಕ್ತಿ ಮರಣ ಹೊಂದಿದರೆ ಆತನನ್ನು ಕೊಂದು ಹೋಗಿ ದಫನ್ ಮಾಡುವುದು ಆಗಿತ್ತು ಆ ಕಾಲದ ಜನ ಮಾಡುತ್ತಿದ್ದದ್ದು.ತಾಯಿಯ ಗರ್ಭಕೋಶದಲ್ಲಿ ಒಂದು ಶಿಶು ಹೇಗೆ ಇರುತ್ತದೋ ಅದೆ ರೀತಿ ಸತ್ತ ಮೃತ ದೇಹವನ್ನು ಮಾಡಿ ಮಣ್ಣಿನಲ್ಲಿ ಹೂತು ಹಾಕುತ್ತಿದ್ದರು.
ಹಾಗೆ ಕಾಲ ಮುಂದುವರಿಯಿತು.1000 ವರ್ಷಗಳು ಮುಂದುವರಿಯುತ್ತಿದ್ದಂತೆ ಈಜಿಪ್ಟ್ ನ ಜನರ ನಡುವೆ ದೈವ, ಮತ ವಿಶ್ವಾಸ ಎಲ್ಲ ಪ್ರಾರಂಭವಾಗಿತ್ತು.ಅದರೊಂದಿಗೆ ಅಂಧ ವಿಶ್ವಾಸ ಕೂಡ ಈಗಿಪ್ಟ್ ನ ಜನರ ಮನಸ್ಸಿಗೆ ಬರಲಾರಂಭಿಸಿತು.ಇದರ ಫಲವಾಗಿರುತ್ತದೆ ನಾವು ಇಂದು ಕಾಣುವ ಪಿರಮಿಡ್ ಅನ್ನುವುದು.ವಿಶ್ವಾಸ ಹೆಚ್ಚಾಗುತ್ತಾ ಈಜಿಪ್ಟ್ ನ ಜನ ಅಂಧ ವಿಶ್ವಾಸದ ಕಡೆ ಬಾಗುತ್ತಾರೆ.ಮರಣ ನಂತರದ ಜೀವನ ಹಾಗೂ ಪುನರ್ಜನ್ಮದಲ್ಲಿ ಈಜಿಪ್ಟ್ ಜನ ನಂಬಿಕೆ ಇಡುತ್ತಾರೆ.ಆ ಕಾಲದಲ್ಲಿ ಎಲ್ಲರೂ ಸಂಪಾದನೆ ಮಾಡಿದ್ದು ಅವರ ಮರಣ ನಂತರದ ಜೀವನಕ್ಕಾಗಿ ಆಗಿತ್ತು. ಚಿನ್ನ ,ಬೆಳ್ಳಿ ಮತ್ತು ಇನ್ನಿತರ ಎಲ್ಲ ವಸ್ತುಗಳನ್ನು ಅವರು ಸಂಪಾದಿಸಿದ್ದು ತಮ್ಮ ಮರಣ ನಂತರದ ಜೀವನ ಬಹಳ ಸುಖಕರವಾಗಿ ಹಾಗೂ ಆಡಂಬರದಿಂದ ಕೂಡಿರಬೇಕು ಎಂದು.ಈಜಿಪ್ಟ್ ನವರ ನಂಬಿಕೆ ಏನೆಂದರೆ ಸತ್ತ ನಂತರ ಆತನ ಆತ್ಮ ಆಕಾಶಕ್ಕೆ ಹೋಗಿ ಅಲ್ಲಿ ನಕ್ಷತ್ರವಾಗಿ ಅಲ್ಲಿ ಬದುಕುತ್ತಾರೆ ಎಂದಾಗಿತ್ತು. ಈ ರೀತಿ ಮರಣದ ನಂತರ ಬದುಕಬೇಕಾದರೆ ಸತ್ತ ಶವ ಶರೀರಕ್ಕೆ ಯಾವುದೇ ರೀತಿಯ ಕೇಡು ಬರದಂತೆ ನೋಡಿಕೊಳ್ಳಬೇಕು ಎನ್ನುವ ವಿಶ್ವಾಸ ಕೂಡ ಇತ್ತು. ಈ ಒಂದು ಕಾರಣದಿಂದಲೇ ಶವ ಶರೀರವನ್ನು ಮಮ್ಮಿಗಳಾಗಿ ಮಾಡುವ ತಂತ್ರಜ್ಞಾನಕ್ಕೆ ಈಜಿಪ್ಟ್ ನ ಜನ ತಲುಪುವುದು
ಈ ರೀತಿ ಮಮ್ಮಿ ಮಾಡುವ ವಿಧಾನ ಎಂದರೆ ಸತ್ತ ಶರೀರದ ಹೊಟ್ಟೆಯ ಬಲ ಭಾಗದಲ್ಲಿ ಒಂದು ರಂಧ್ರ ಮಾಡಿ ಆಂತರಿಕ ಅವಯವಗಳನ್ನು ತೆಗೆದು ಹಾಕುವುದು ಆಗಿತ್ತು. ಅವರು ಮುಖಕ್ಕೆ ಹೆಚ್ಚಿನ ಗೌರವ ಕಲ್ಪಿಸಿರುವುದರಿಂದ ಮುಖಕ್ಕೆ ಯಾವುದೇ ರೀತಿಯ ಕೇಡು ಮಾಡಲು ಅವರು ಇಷ್ಟಪತ್ತಿರಲಿಲ್ಲ. ಅದಕ್ಕಾಗಿ ಮೂಗಿನಿಂದ ತಲೆಯ ಒಳಗಿನ ಎಲ್ಲ ವಿಷಯವನ್ನು ತೆಗೆಯುವ technology ಯನ್ನ ಆಗಿನ ಈಜಿಪ್ಟ್ ನ ಜನ ಕಂಡು ಹಿಡಿದಿದ್ದರು. ಈ ರೀತಿ ಎಲ್ಲ ವಿಷಯಗಳನ್ನು ಶರೀರದಿಂದ ತೆಗೆದ ನಂತರ ಅದರ ಹೃದಯವನ್ನು ಅದೆ ಶರೀರಕ್ಕೆ ಪುನಃ ಇಡಲಾಗುತ್ತಿತ್ತು. ಹೃದಯದಲ್ಲಿ ಆತ್ಮ ಇದೆ ಎಂದು ಅವರು ನಂಬಿದ್ದರು. ಅದೇ ರೀತಿ ಮೃತ ದೇಹದ ಎಲ್ಲಾ ಜಲಾಂಶವನ್ನು ತೆಗೆದ ನಂತರ ಅಪರೂಪದ ಸುಘಂದ ದ್ರವ್ಯದಿಂದ ಅದಕ್ಕೆ ಸ್ನಾನಮಾಡಿಸಿ ಅದು ಒಣಗಿದ ನಂತರ ಅದರ ಒಳಗೆ ಮರಳು ಮತ್ತು ಬಟ್ಟೆ ವಸ್ತ್ರಗಳನ್ನು ಇಟ್ಟು ಸುಗಂದ ದ್ರವ್ಯದಲ್ಲಿ ಮುಳುಗಿಸಿದ ಬಟ್ಟೆಯಿಂದ ಅದನ್ನು ಸುತ್ತುತ್ತಿದ್ದರು(ಇಲ್ಲಿ ಅದು ಎಂದು ಹೇಳಿದ್ದು ಮೃತ ದೇಹವನ್ನು ಆಗಿರುತ್ತದೆ ).ನಂತರ ಆ ಮೃತ ದೇಹವನ್ನು ಪ್ರತ್ಯೇಕವಾಗಿ ನಿರ್ಮಿಸಿದ ಪೆಟ್ಟಿಗೆಯಲ್ಲಿ ಇಡಲಾಗಿತ್ತು ಅಂದಿನ ಈಜಿಪ್ಟ್ ನ ಜನ ಮಾಡಿರುವಂತದ್ದು.
ಅಲ್ಲಿ ರಾಜ ನಾಗಿ ಯಾರಾದರೂ ನೇಮಕವಾದರೆ ಆತನ ಮೊದಲ ಆಜ್ಞೆ ತನಿಗೋಸ್ಕರ ಒಂದು ಪಿರಮಿಡ್ ನಿರ್ಮಿಸಬೇಕು ಎಂದಾಗಿರಬಹುದು.ಪಿರಮಿಡ್ ನ ಮೆಟ್ಟಿಲು ಹತ್ತಿ ಬೇಗನೆ ಆಕಾಶಕ್ಕೆ ತಲುಪಬಹುದು ಎನ್ನುವ ಕಾರಣದಿಂದ ಅವರು ಪಿರಮಿಡ್ ಅನ್ನು ನಿರ್ಮಿಸುತ್ತಿದ್ದರು. ಆದ್ದರಿಂದಲೇ ಮೊದಲ ಕಾಲದಲ್ಲಿ ನಿರ್ಮಿಸಿದ ಪಿರಮಿಡ್ ಮೆಟ್ಟಿಲುಗಳನ್ನು ಒಳಗೊಂಡಿತ್ತು. ಹಾಗೆ ವರ್ಷಗಳು ಕಳೆದಂತೆ ಮತ್ತೆ ಬಂದ ರಾಜರು ಥಮಿಗೋಸ್ಕರ ಮಾಡುವ ಪಿರಮಿಡ್ ಗಳು ಸುಂದರವಾಗಿ ಇರಬೇಕು ಎಂದುಕೊಂಡು ಅದರ ಹಿಂಬದಿಯನ್ನು ಬಹಳ ನೈಸ್ ಆಗಿ ಮಾಡಲು ಮತ್ತು ಬಿಳಿ ಬಣ್ಣದ ಮಾರ್ಬಲ್ ಹಾಕಲು ಕೂಡ ಆರಂಭಿಸಿದರು.ಅದರೊಂದಿಗೆ ಅವರು ಮಾಡಿರುವಂತದ್ದು ಪಿರಮಿಡ್ ನ ಮೇಲಿನ ಭಾಗವನ್ನು ಚಿನ್ನದಿಂದ ಅಲಂಕರಿಸಿ ಅದರಲ್ಲೂ ತುತ್ತ ತುದಿಯಲ್ಲಿ ಒಂದು ವಜ್ರವನ್ನು ಇದುವುದಾಗಿತ್ತು.ಆದ್ದರಿಂದ ಹಗಲು ಪಿರಮಿಡ್ ನ ಮೇಲಿನ ಭಾಗ ಹೊಳೆಯುವಂತೆ ಕಾಣುತ್ತಿತ್ತು. ನಾವು ಈಗ ನೋಡುವ ಪಿರಮಿಡ್ ನ ಪೂರ್ವ ಸ್ಥಿತಿ ಅನ್ನುವುದು ಈ ರೀತಿ ಆಗಿತ್ತು. ನಾವು ಈಗ ನೋಡುವ ಬಣ್ಣದಲ್ಲಿಯೋ ರೀತಿಯಲ್ಲಿಯೂ ಆಗಿರಲಿಲ್ಲ ಪಿರಮಿಡ್ ಇದ್ದದ್ದು.ಮತ್ತೆ ಪಿರಮಿಡ್ ಗಳಿಗೆ ಏನಾಯ್ತು ಎಂದು ಕೇಳುವುದಾದರೆ, ಮುಂದೆ ಬಂದ ಅನೇಕ ದರೋಡೆಕೋರರು ಪಿರಮಿಡ್ ಗಳಿಂದ ಅನೇಕ ಅಮೂಲ್ಯ ರತ್ಣಗನನ್ನು ಕೊಳ್ಳೆಹೊಡೆದಿದ್ದರು. ಅಲ್ಲದೆ ಮುಂದೆ ಬಂದ ರಾಜರು ಬೇರೆ ಕಟ್ಟಡವನ್ನು ನಿರ್ಮಿಸಲು ಬೇಕಾದ ವಸ್ತುಗಳನ್ನು ಈ ಪಿರಮಿಡ್ ಗಳಿಂದ ತೆಗೆದು ಉಪಯೋಗಿಸುತ್ತಿದ್ದರು.ಇದರ ಫಲವಾಗಿದೆ ಬಿಳಿ ಬಣ್ಣದ ಸುಂದರವಾದ ಪಿರಮಿಡ್ ಈಗಿನ ಸ್ಥಿತಿಗೆ ಬಂದದ್ದು.
ವಿಷಯಗಳು ಹೀಗೆಲ್ಲ ಇದ್ದರೂ ಬಹಳ ಕಡಿಮೆ ಸಮಯದಲ್ಲಿ ಹೇಗೆ ಈಜಿಪ್ಟ್ ನ ಜನರಿಗೆ ಈ ರೀತಿ ಯಾದ ಪಿರಮಿಡ್ ಅನ್ನು ನಿರ್ಮಿಸಲು ಸಾಧ್ಯವಾಯಿತು?.ಎನ್ನುವುದು ಈಗಲೂ ಒಂದು ಪ್ರಶ್ನೆಯಾಗಿ ಉಳಿದಿದೆ.800km ದೂರದಿಂದ ನೈಲ್ ನದಿಯ ಆಚಿನಿಂದ ದೊಡ್ಡ ದೊಡ್ಡ ಕಲ್ಲುಗಳನ್ನು ತರಲಾಗಿತ್ತು ಪಿರಮಿಡ್ ನಿರ್ಮಿಸಲು. ಆ ಒಂದು ಸಮಯದಲ್ಲಿ ಚಕ್ರದ ವಾಹನವನ್ನು ಪ್ರಾಣಿಗಳ ವಾಹನವನ್ನು ಉಪಯೋಗಿಸಲು ಪ್ರರಂಬಿಸಿರಲಿಲ್ಲ. ಆದರಿಂದ ಅಷ್ಟು ದೊಡ್ಡ ಕಲ್ಲುಗಳನ್ನು ತಂದು 625 ವರ್ಷಗಳಲ್ಲಿ ಮಾಡಲು ಸಾಧ್ಯವಾಗದ ಆ ಪಿರಮಿಡ್ ಅನ್ನು ಈಗಿಪ್ಟ ನ ಜನ 15 ವರ್ಷಗಳಲ್ಲಿ ಹೇಗೆ ನಿರ್ಮಿಸಿದರು, ಎನ್ನುವುದು ದೊಡ್ಡ ರೀತಿಯ ಅದ್ಭುತವೇ ಆಗಿದೆ . ಒಂದು ರಾಜ ಸತ್ತರೆ ಆತನ ಶರೀರದೊಂದಿಗೆ ಚಿನ್ನ ವಜ್ರ ವೈಢೂರ್ಯಗಳನ್ನು ಪಿರಮಿಡ್ ನಲ್ಲಿ ಇಡುವುದರ ಜೊತೆಗೆ ಆತನ ಸೈನಿಕರನ್ನು ಜೀವದೊಂದಿಗೆ ಮಮ್ಮಿಗಳನ್ನಾಗಿ ಮಾಡಿ ಈ ಪಿರಮಿಡ್ ನಲ್ಲಿ ಇಡುವ ಪದ್ಧತಿ ಕೂಡ ಇತ್ತು. ಈ ಎಲ್ಲ ವಿಷಯಗಳಿಂದ ನಮಿಗೆ ತಿಲಿದಂಥದ್ದು ಕೇವಲ ಒಂದು ಅಂಧ ವಿಶ್ವಾಸದ ಕಾರಣದಿಂದ ಈ ತಿಳಿಸಿದಂತೆ ಮನುಷ್ಯರನ್ನು ಜೀವದೊಂದಿಗೆ ದಫನ್ ಮಾಡುತ್ತಿದ್ದದ್ದು ಹಾಗೂ ಇಷ್ಟು ದೊಡ್ಡ ಗಾತ್ರದ ಪಿರಮಿಡ್ ಅನ್ನು ನಿರ್ಮಿಸಿದ್ದು ಎಂದು.
ಅಲ್ಲದೆ ಪಿರಮಿಡ್ ಗಳ ಬಗ್ಗೆ ಅನೇಕ ಥಿಯರಿ ಗಳು ಇದೆ.ಅದೆಂದರೆ ಅದ್ರ ಕೆಳಭಾಗದಲ್ಲಿ ಸೂಪರ್ city ಗಳು ಇದೆ ಮತ್ತು ಪಿರಮಿಡ್ ನ ರಹಸ್ಯ ಕೂಡ ಅಲ್ಲಿ ಇದೆ ಎಂದು.ಇನ್ನೂ ಕೆಲ ಜನ ಹೇಳುವಂತೆ ಏಲಿಯನ್ ಗಳ ಸಹಾಯದಿಂದ ಪಿರಮಿಡ್ ಅನ್ನು ನಿರ್ಮಿಸಲಾಗಿದೆ ಎಂದು. ಏನೇ ಇದ್ದರೂ ಪಿರಮಿಡ್ ಅನ್ನುವುದು ಒಂದು ಕೋಣೆ ಇಲ್ಲದ ಅದ್ಬುತವಾಗಿ ಉಳಿದಿದೆ.
ಇಂದಿನ ವಿಷಯ ಎಲ್ಲರಿಗೂ ಇಷ್ಟ ಆಗಿರುತ್ತೆ ಎಂದು ಭಾವಿಸುತ್ತೇನೆ. ಧನ್ಯವಾದಗಳು.🙏🙏
Comments
Post a Comment