Burj-Al-Arab
ಸ್ನೇಹಿತರೇ ನೀವು 3 ಸ್ಟಾರ್ ಹೋಟೆಲ್ ,5 ಸ್ಟಾರ್ ಹೋಟೆಲ್ ಅಂತ ಎಲ್ಲ ಕೇಳಿರಬಹುದು ಅಲ್ವಾ. ಆದರೆ ನಾನು ಇಂದು ನಿಮಗೆ ತಿಳಿಸಲಿರುವುದು ಜಗತ್ತಿನ ಏಕೈಕ 7 ಸ್ಟಾರ್ ಹೋಟೆಲಿನ ಕುರಿತಾಗಿದೆ.ಆಡಂಬರದ ಕೊನೆಯ ಸ್ಥಳ ಎಂದು ಕರೆಯಲ್ಪಡುವ ಈ ಹೋಟೆಲಿನ ಅತೀ ಸಣ್ಣ ರೂಮಿನ 1 ದಿನದ ಬೆಲೆ ಅನ್ನುವಂತಹದ್ದು ಒಂದು ಲಕ್ಷ ರೂಪಾಯಿಗಳು .ಅದೇ ಅಲ್ಲಿನ presidential suite ಅಥವಾ ದೊಡ್ಡ ರೂಮಿನ 1 ದಿನದ ಬೆಲೆ ಸರಿಸುಮಾರು 16 ಲಕ್ಷದಿಂದ 20 ಲಕ್ಷ ರೂಪಾಯಿಗಳು.ಇದಕ್ಕೆ ಮಾತ್ರ ಆ ಹೋಟೆಲಿನಲ್ಲಿ ಏನಿದೆ ಆ ರೂಮಿನಲ್ಲಿ ಏನಿದೆ ಎಂದು ನೀವು ಯೋಚಿಸುತ್ತಿರಬಹುದು ಅಲ್ವಾ. ಅದರ ಬಗ್ಗೆ ತಿಳಿಯೋಣ.
ಆಡಂಬರದ ಇನ್ನೊಂದು ಹೆಸರಾಗಿರುವ Burj-Al-Arab ಎಂದು ಹೆಸರಿರುವ ಈ ಹೋಟೆಲ್ ದುಬೈನ ಒಂದು ಗುರುತು ಎಂದು ವಿಶೇಷಿಸಲಾಗುತ್ತದೆ.
1994 ರಲ್ಲಿ ಈ ಕಟ್ಟಡದ ಕೆಲಸ ಪ್ರಾರಂಭವಾಗುತ್ತದೆ. ಮೊತ್ತ 202 ಕೊನೆಗಳಿರುವ ಈ ಕಟ್ಟಡದಲ್ಲಿ 56 ಮಹದಿಗಳಿವೆ.ಈ 56 ಮಹದಿಗಳಲ್ಲಿ 3 ಮಹಡಿಗಳು under ground ನಲ್ಲಿ ಇದೆ.ಆದ್ರೂ ಈ 56 ಮಹಡಿ ಇದ್ದ ಈ ಹೋಟೆಲ್ ನಂತೆ ಅನೇಕ ಹೋಟೆಲ್ ಗಳು ಸಿಗುತ್ತವೆ.ಮತ್ತೆ ಈ ಹೋಟೆಲನ್ನು ಆಡಂಬರದ ಅಂತ್ಯ ಎಂದು ಹೇಳಲು ಕಾರಣವಾದರೂ ಏನು ಎಂದು ತಿಳಿದುಕೊಳ್ಳೋಣ.
ನಾವು ಈ ಹೋಟೆಲ್ ಅನ್ನು ಊರಲ್ಲಿ ಬುಕ್ ಮಾಡಿ ದುಬೈ ಏರ್ಪೊಟ್ ನಲ್ಲಿ ಇಳಿಯುವಾಗ ಅಲ್ಲಿ ಹೋಟೆಲಿನವರು ಕೇಳುತ್ತಾರೆ.ನಿಮಗೆ ಇಲ್ಲಿಂದ ಹೋಟೆಲ್ ಗೆ ಹೋಗಲು Rolls Royce ಕಾರ್ ಬೇಕ ಅಥವಾ BMW ಕಾರ್ ಬೇಕ ಎಂದು.ಅಷ್ಟೊಂದು ದುಬಾರಿಯಾದ ಹೋಟೆಲ್ ಆಗಿದೆ ಅದು.ಅಲ್ಲಿನ ಒಂದು Rolls Royce ನ ಬೆಲೆ ಹತ್ತು ಕೋಟಿ ರೂಪಾಯಿಗಳು.ಅಲ್ಲದೆ ಜಗತ್ತಿನಲ್ಲಿ ಅತೀ ಹೆಚ್ಚು white Rolls Royce ಇರುವ ರೆಕಾರ್ಡ್ ಇವರದ್ದೇ ಆಗಿದೆ.ಮತ್ತು ಅವರು ಏರ್ಪಾಟ್ ನಲ್ಲಿ ಕೇಳುವ ಮತ್ತೊಂದು ಪ್ರಶ್ನೆ ನೀವು ಭೂ ಮಾರ್ಗದಿಂದ ಹೋಗ್ತೀರಾ ಅಥವಾ ವಾಯು ಮಾರ್ಗದಿಂದ ಹೋಗ್ತೀರಾ ಎಂದು.ವಾಯು ಮಾರ್ಗದಿಂದ ಎಂದರೆ ಏರ್ಪೋಟ್ ನಿಂದ ಹೋಟೆಲ್ ಗೆ ಹೆಲಿಕಾಫ್ಟರ್ ವ್ಯವಸ್ಥೆ ಇದೆ .ಆದರೆ ಅದಕ್ಕೆ ಬೇರೇನೇ ದುಡ್ಡು ಕೊಡಬೇಕು.
ಅಲ್ಲಿನ ಮತ್ತೊಂದು ವಿಶೇಷತೆ ಎಂದು ಹೇಳಬೇಕಾದರೆ ಬುರ್ಜ್ ಅಲ್ ಅರಬ್ ಎಂಬ ಈ ಹೋಟೆಲ್ ದುಬೈ ಮಣ್ಣಿನಲ್ಲಿ ಇರುವುದು ಅಲ್ಲ .ಅದಕ್ಕಾಗಿ ಒಂದು ದ್ವೀಪವನ್ನ ನಿರ್ಮಿಸಿ ಅದರ ಮೇಲೆ ಈ ಬುರ್ಜ್ ಅಲ್ ಅರಬ್ ಎಂಬ ಹೋಟೆಲನ್ನು ಕಟ್ಟಲಾಗಿದೆ.ಅದಕ್ಕಾಗಿ 200-300 ಕಾಂಕ್ರೀಟ್ ಪಿಲ್ಲರ್ ಉಪಯೋಗಿಸಿ ಸಮುದ್ರದಲ್ಲಿ ಅದರ foundation ನಿರ್ಮಿಸಲು ತೆಗೆದುಕೊಂಡ ಸಮಯ ಅನ್ನುವುದು ಸುಮಾರು 3 ವರ್ಷಗಳು.ಅದರ ನಂತರದ 3 ವರ್ಷ ಸಮಯದಲ್ಲಗಿದೆ ಬಾಕಿ ಇರುವ ಪೂರ್ತಿ ಕಟ್ಟಡ ನಿರ್ಮಿಸಿರುವಂತದ್ದು.
ಆರ್ಟಿಫಿಷಿಯಲ್ ಆಗಿ ನಿರ್ಮಿಸಿರುವ ದ್ವೀಪದ ಮೇಲೆ ಈ Burj-Al-Arab ಹೋಟೆಲನ್ನು ನಿರ್ಮಾಣ ಮಾಡಿರುವುದರಿಂದ ಪ್ರಪಂಚದಲ್ಲಿ ಆರ್ಟಿಫಿಷಿಯಲ್ ದ್ವೀಪದಲ್ಲಿ ಇರುವ ಏಕೈಕ sky scraper ಎಂಬ ರೆಕಾರ್ಡ್ ಕೂಡ ಇದಕ್ಕಿದೆ.ಅಲ್ಲದೆ ಇನ್ನೊಂದು ರೆಕಾರ್ಡ್ ಕೂಡ ಇದೆ.ಏನೆಂದರೆ ಜಗತ್ತಿನ ಅತೀ ಎತ್ತರದ ಕಟ್ಟಡಗಳಲ್ಲಿ 7 ನೆ ಸ್ಥನದಲ್ಲಾಗಿದೆ ಬುರ್ಜ್ ಅಲ್ ಅರಬ್ ಇರುವಂತಹದ್ದು.ಈ ಹೋಟೆಲನ್ನು ಪ್ರೈವೇಟ್ ದ್ವೀಪದಲ್ಲಿ ನಿರ್ಮಿಸಿರುವುದರಿಂದ ನೆಲ ಮತ್ತು ದ್ವೀಪದ ನಡುವೆ ಒಂದು ಪ್ರೈವೇಟ್ ಸೇತುವೆ ಇದೆ. ಆ ಸೇತುವೆಯಲ್ಲಿ ಪ್ರಯಾಣಿಸಲು ಅವಕಾಶ ಇರುವಂತಹದ್ದು ಇಬ್ಬರಿಗೆ ಮಾತ್ರ. ಒಂದು ಆ ಹೋಟೆಲಿನಲ್ಲಿ ಇರಲು ಹೋಗುವವರಿಗೆ ಮತ್ತೊಂದು ಅಲ್ಲಿರುವವರನ್ನು ನೋಡಲು ಹೋಗುವವರಿಗೆ. ಈ ಎರಡು ಜನರಿಗೆ ಮಾತ್ರ ಈ ಸೇತುವೆಯಲ್ಲಿ ಪ್ರಯಾಣಿಸಲು ಅವಕಾಶ ಇರುವಂತಹದ್ದು
Entrence of Burj-Al-Arab
ಇನ್ನು ಒಬ್ಬರು ಹೋಟೆಲ್ ಬುಕ್ ಮಾಡಿ ನಂತರ ಏರ್ಪೊಟ್ಗೆ ಕಾರ್ ಬಂಧು ಅವರನ್ನು ಕೆರೆದುಕೊಂಡು ಹೋಗಿ ಹೋಟೆಲಿನಲ್ಲಿ ಬಿಡುತ್ತದೆ.ಅಲ್ಲಿಂದ ಅವರು ಹೋಟೆಲಿನ ಒಳಗೆ ಪ್ರವೇಶಿಸುವ ಸಂಧರ್ಬದಲ್ಲಿ ಅಲ್ಲಿನ ಲಾಬಿ ಯನ್ನು ನೋಡಬೇಕಾದರೆ ಅವರು ಇಷ್ಟರವರೆಗೆ ನೋಡದ ಹೂವಿನಿಂದ ಅಲಂಕರಿಸಿದ ಸುಂದರ ವಿಕ್ಷಣೆಯನ್ನಾಗಿರುತ್ತದೆ.ನೀವು ಚಿಂತಿಸುತ್ತಿರಬಹುದು ಒಂದುವೇಳೆ ಆ ಹೂಗಳು ಅರಬ್ ದೇಶದಲ್ಲಿ ಇರುವಂತಹದ್ದು ಆಗಿರಬಹುದು ಎಂದು.ಆದರೆ ನಿಮ್ಮೆಲ್ಲ ಚಿಂತನೆಗೆ ವಿರುದ್ಧವಾಗಿ 6 ರಿಂದ 7 ದೇಶಗಳಿಂದ ಅಲ್ಲಿನ ಲಾಬಿ ಹಾಗೂ ಪ್ರವೇಶನ ದ್ವಾರವನ್ನು ಅಲಂಕರಿಸಲು ಹೂವುಗಳನ್ನು ತರುವಂಥದ್ದು .ಉದಾಹರಣೆಗೆ ದಕ್ಷಿಣ ಆಫ್ರಿಕಾ,ಥೈಲ್ಯಾಂಡ್ ನಂತಹ ಅನೇಕ ದೇಶಗಳಿಂದ ಇವರು ಹೂಗಳನ್ನು ಶೇಖರಣೆ ಮಾಡುತ್ತಾರೆ.
The cost and luxury of Burj-Al-Arab
ಇನ್ನು ರಿಸೆಪ್ಷನ್ ಬಗ್ಗೆ ಹೇಳಬೇಕಾದರೆ 60 ರಿಸೆಪ್ಷನ್ ಗಳು ಈ ಹೋಟೆಲ್ನ ವಿವಿಧ. ಮಹಡಿಗಳಲ್ಲಾಗಿ ಕಾಣಲು ಸಿಗುವಂತಹದ್ದು.ಅಲ್ಲದೆ ನಾವು ಹೋಟೆಲ್ಗೆ ಪ್ರವೇಶಿಸುವಾಗ ನಾವು ಗಮನಿಸುವುದು ಏನೆಂದರೆ ನೆಲದಲ್ಲಿ ಗೋಡೆಗಳಲ್ಲಿ ಕುರ್ಚಿಯ ಪಕ್ಕ ಟಿವಿ ಯ ಪಕ್ಕ ಪೂರ್ತಿ ಚಿನ್ನದ ಲೇಪನ ಮಾಡಿರುವುದು ಆಗಿದೆ .ಆದರೆ ಅದು ಲೇಪನ ಮಾತ್ರ ಅಲ್ಲ ಅದು ಮೂಲ ಚಿನ್ನವೆ ಆಗಿದೆ.ಅಲ್ಲದೆ ಅಲ್ಲಿನ ಈಜುಕೊಳದಲ್ಲಿ bathroom ಟೈಲ್ಸ್ ಗಳಲ್ಲಿ ಅನೇಕ ಚಿನ್ನಗಳನ್ನು ಕಾಣಬಹುದು.ಆದ್ದರಿಂದಲೇ ಈ ಹೋಟೆಲ್ ಅನ್ನು ನಿರ್ಮಿಸಲು ಆದ ವೆಚ್ಚ ₹150,00,00,00,000(ಹದಿನೈದು ಸಾವಿರ ಕೋಟಿ ರೂಪಾಯಿ)
ಹಾಗೆ ಒಬ್ಬ ವ್ಯಕ್ತಿ ಅಲ್ಲಿನ ರಿಸೆಪ್ಷನ್ ಗೆ ತಲುಪಿದರೆ ಅವನಲ್ಲಿ ಕೆಳುವಂತಹದ್ದು ನಿಮಗೆ ಯಾವರೀತಿಯ ತಲೆದಿಂಬು ಬೇಕು ಎಂದು. ಈಕೆಂದರೆ ಅಲ್ಲಿ 17 ರೀತಿಯ ತಲೆದಿಂಬುಗಳಿವೆ.ಅದು ಅಲ್ಲಿನ 1 ಲಕ್ಷ ರೂಪಾಯಿಯ ಅತೀ ಸಣ್ಣ ರೂಮನ್ನು ಬುಕ್ ಮಾಡಿದವರಿಗೂ ಹಾಗೂ 16 ಲಕ್ಷದ ಆಡಂಬರದ ರೂಮ್ ಬುಕ್ ಮಾಡಿದವರಿಗೂ ಈ ಆಯ್ಕೆ ಇದೆ.ನಂತರ ಇವರು ನಮಿಗೆ ಅಂತ ಒಂದು personal Buttler ಅನ್ನು ನೇಮಿಸುತ್ತಾರೆ ಆ Buttler ನಮ್ಮ ಪೆಟ್ಟಿಗೆ ಸಾಮಾನುಗಳನ್ನು ರೂಮಿಗೆ ತೆಗೆದುಕೊಂಡು ಹೋಗುತ್ತಾರೆ.ಮತ್ತು ರೂಮಿನ ಬೆಡ್ನಿಂದ ಹಿಡಿದು ಎಲ್ಲಾ ವಿಷಯವನ್ನು ಒಂದೊಂದಾಗಿ ಹೇಳುತ್ತಾರೆ.1ಲಕ್ಷ ರೂಪಾಯಿಯ ಅತೀ ಸಣ್ಣ ರೂಮನ್ನು ವಿವರಿಸಲು ಆ Buttler ಗೆ 30 ನಿಮಿಷಗಳ ಸಮಯ ಹಿಡಿಯುತ್ತದೆ ಅಂತೆ.ಅಷ್ಟೊಂದು ಅದಂಬರವಾಗಿರುತ್ಹೆ ಅಂತೆ ಆ 1 ಲಕ್ಷದ ರೂಮ್.ಇನ್ನೂ ನಮಿಗೆ ಏನು ಬೇಕು ಅದನ್ನು ಮಾಡಲು ಆ Buttler 24 gante Namma ರೂಮಿನ ಹೊರಗಡೆ ಇರುತ್ತನಂತೆ.ಸೂಪರ್ ಅಲ್ವಾ.
Food in Burj-Al-Arab
![]() |
ಇನು ಇಲ್ಲಿನ ಆಹಾರದ ಬಗ್ಗೆ ನೋಡಬೇಕಾದರೆ ಇಲ್ಲಿ ಪೂರ್ತಿ ಬಫೆ ಸಿಸ್ಟಮ್ ಆಗಿರುತ್ತೆ.ಇಲ್ಲಿನ ಚೆಫ್ ಗಳು ಪ್ರಪಂಚದಲ್ಲೇ ಅತ್ಯಂತ ಉತ್ತಮ ಚೆಫ್ ಗಳು ಎಂದು ಕರೆಯಲ್ಪಟ್ಟಿದ್ದಾರೆ.ಆದ್ದರಿಂದಲೇ ಉತ್ತಮ ಗುಣಮಟ್ಟದ ಆಹಾರವು ನಮಿಗೆ ಈ ಹೋಟೆಲ್ ನಿಂದ ಸಿಗುವಂತಹದ್ದು . ಇನ್ನು ರೆಸ್ಟೋರೆಂಟ್ ಬಗ್ಗೆ ನೋಡುವುದಾದರೆ ಟೋಟಲ್ ಇಲ್ಲಿ 6 ರೆಸ್ಟೋರೆಂಟ್ ಗಳಿವೆ.ಅದ್ರಲ್ಲಿ ಒಂದು ಸಮುದ್ರದ ವೀಕ್ಷಣೆ ಮಾಡಿಕೊಂಡು ಆಹಾರ ಸೇವಿಸುವಂತೆ ಕೊನೆಯ ಮಹಾಡಿಯಲ್ಲಿದೆದೆ.ಮತ್ತೊಂದು ವಿಶೇಷ ಏನೆಂದರೆ ಈ ಹೋಟೆಲ್ ನ 3 ಮಹಡಿ underground ನಲ್ಲಿ ಇದೆಯಲ್ವ.ಇದು ಸಮುದ್ರದ ಮದ್ಯೆ ಆದುದರಿಂದ ಒಂದು ರೆಸ್ಟೋರೆಂಟ್ ಕೆಳಗಿನ ಮಹದಿಯಲ್ಲಿದ್ದು ಸಮುದ್ರದ ಒಳಗೆ ಕೂತು ಆಹಾರ ಸೇವನೆ ಮಾಡಿದ ಹಾಗೆ ಅನ್ನಿಸುತ್ತದೆ.ಇನ್ನೂ ಯಾರಿಗಾದರೂ ಸಮುದ್ರದ ಮದ್ಯೆ ಮಲಗಬೇಕು ಅಂತ ಇದ್ದರೆ underground ನ ಸಮುದ್ರದ ಮಧ್ಯದ ರೂಮ್ ಬುಕ್ ಮಾಡಿ ಮೀನುಗಳು ಈಜುವುದನ್ನು ನೋಡಿ ಮಲಗಬಹುದು.ಈಗ ತಿಳಿಸಿದಂತೆ ಇಲ್ಲಿ 6 ರೆಸ್ಟೋರೆಂಟ್ ಗಲಿವೆ . 6 ರೆಸ್ಟೋರೆಂಟ್ ಗಳು ಬೇರೆ ಬೇರೆ ಯಾಗಿದೆ.ಉದಾಹರಣೆಗೆ ಒಂದು ಇಂಡಿಯನ್ ರೆಸ್ಟೋರೆಂಟ್ ಆದರೆ ಮತ್ತೊಂದು ಚೈನೀಸ್ ರೆಸ್ಟೋರೆಂಟ್ ಎಂಬಂತೆ ಬೇರೆ ಬೇರೆ ಯಾಗಿರುತ್ತದೆ.ಮತ್ತು ಇಲ್ಲಿನ ಬೆಡ್ಗಳು ರೋಟೇಷನಲ್ ಬೆಡ್ ಆಗಿರುವುದರಿಂದ 360 ಡಿಗ್ರೆ ಗೆ ತುರುಗಿಸಬಹುದು.
ಒಂದುಹ ಹೋಟೆಲ್ ಒದಗಿಸುವ ಫೆಸಿಲಿಟಿ ಯಾನ್ನು ನೋಡಿ ಹೋಟೆಲ್ಗೆ ರೇಟಿಂಗ್ ನೀಡುತ್ತಾರೆ ಅಂದರೆ 3 🌟, 5 🌟 ಎಂದು.ಆದರೆ 5ಸ್ಟಾರ್ ನ ನಂತರಕ್ಕೆ ಹೋಟೆಲ್ ಕೂಡ ಹೋಗುವುದಿಲ್ಲ.ಆದರೂ ಈ ಹೋಟೆಲ್ಗೆ 7 🌟 ಲಭಿಸಲು ಕಾರಣ ಏನೆಂದು ಕೇಳಿದರೆ,ಇಲ್ಲಿ ಇರಲು ಅನೇಕ ಸೆಲೆಬ್ರಿಟಿ ಗಳು ಬರುತ್ತಾರೆ.ಹಾಗೆ ಒಮ್ಮೆ London ನ ಒಂದು ಸೆಲೆಬ್ರಿಟಿ ಬಂದು ಇಲ್ಲಿ ಇದ್ದು ನಂತರ ಹೋಗುತ್ತಾರೆ.ಹೋಗಿ London ನ ಸಾಮಾಜಿಕ ಜಾಲತಾಣಗಳಲ್ಲಿ ಈ ಹೋಟೆಲ್ ನ ಬಗ್ಗೆ ಬರೆಯುತ್ತಾರೆ."ಇದು ಜಗತ್ತಿನ ಅತ್ಯುತ್ತಮ ಹೋಟೆಲ್,ಈ ಹೋಟೆಲ್ ಅನ್ನು 5 🌟 ಹೋಟೆಲ್ ನೊಂದಿಗೆ compare ಮಾಡಲು ಆಗುವುದಿಲ್ಲ.ಇದರಲ್ಲಿ ಲಭಿಸುವ ಸೌಕರ್ಯ ಎಲ್ಲದಕ್ಕಿಂತಲೂ ಮಿಗಿಲಾಗಿದೆ.ಆದ್ದರಿಂದ ಇದು 7 🌟 ಹೋಟೆಲ್ "ಎಂದು ಘೋಷಣೆ ಮಾಡುತ್ತಾರೆ.
ನಿಮಗೆ ಈಗ ಜಗತ್ತಿನ ಅತ್ಯುತ್ತಮ ಏಕೈಕ 7ಸ್ಟಾರ್ ಹೋಟೆಲ್ ನ ಬಗ್ಗೆ ತಿಳಿದಿರಬಹುದು ಎಂದು ಅಂದುಕೊಳ್ಳುತ್ತೇನೆ.
ಧನ್ಯವಾದಗಳು.
Well done 👍👌
ReplyDelete🥰
DeleteNice👍
ReplyDeleteThanks
Delete