ನಾವು ಕಲಿತಷ್ಟು ಹೆಚ್ಚು ಆಸಕ್ತಿ ಬರುವಂತಹ ಒಂದು ವಿಷಯ ಎಂದರೆ ಅದು ಕನಸು.ಒಂದು ಮನುಷ್ಯ ತನ್ನ ಜೀವನದ 6 ವರ್ಷ ಪೂರ್ತಿಯಾಗಿ ಕನಸಿನಲ್ಲೇ ಕಳೆಯುತ್ತಾನೆಯಂತೆ.ಇವತ್ತು ನಾನು ನಿಮಗೆ ತಿಳಿಸಲಿರುವುದು 10 ಕನಸುಗಳ ವಿಶ್ಲೇಷಣೆಯನ್ನಾಗಿದೆ.
ಶಾಸ್ತ್ರ ಲೋಕವು ಇಷ್ಟೊಂದು ಮುಂದುವರಿದಿದ್ದರೂ ಕೂಡ oneirology ಎಂಬ ವೈಜ್ಞಾನಿಕವಾಗಿ ಕನಸುಗಳ ಬಗ್ಗೆ ಅಧ್ಯಯನ ಮಾಡುವ ಕೇಂದ್ರ ಇದ್ದೂ ಕೂಡ ಯಾವ ಕಾರಣದಿಂದ ಮನುಷ್ಯ ಕನಸುಗಳನ್ನು ಕಾಣುತ್ತಾನೆ ಎಂಬ ವಿಷಯಕ್ಕೆ ಉತ್ತರವನ್ನು ಕಂಡುಹಿಡಿಯಲು ಆಗಲಿಲ್ಲ.ಮುಂದೆ ನಡೆಯುವ ವಿಷಯಕ್ಕೆ ತಯಾರಾಗಿ ನಿಲ್ಲಲು ನಮ್ಮ ಮೆದುಳು ಮಾಡುವ ಕೆಲಸವಾಗಿದೆ ಕನಸು ಎಂದು ಸಾಧಾರಣವಾಗಿ ಹೇಳಲಾಗುತ್ತದೆ. ಇಲ್ಲಿ ತಿಳಿಸುವ ವಿಷಯ ವೈಜ್ಞಾನಿಕವಾಗಿ ಸಾಬೀತು ಆಗಲಿಲ್ಲ.ಕೆಲವೊಂದು ಡ್ರೀಮ್ specialist ಗಳು ಸಂಶೋಧನೆ ಮಾಡಿ ತಿಳಿಸಿದ ಕೆಲವೊಂದು ಕನಸುಗಳ ವಿಶ್ಲೇಷಣೆಯಾಗಿದೆ.ಒಂದೊಂದು ವಿಷಯವೂ ಬಹಳಷ್ಟು ಆಸಕ್ತಿಕರವಾಗಿದೆ.
10 dream explanation
1.ಬಹಳಷ್ಟು ಮೇಲಿನಿಂದ ಕೆಳಗೆ ಬೀಳುವುದು.
ಇದು ನಾವು ಸಾಧಾರಣವಾಗಿ ಕಾಣುವ ಕನಸಾಗಿದೆ.ನಾವು ಕಂಡಿರುವಂತಹ ಸ್ಥಳಗಳು,ನಾವು ಕಂಡಿರುವ ವ್ಯಕ್ತಿಗಳು,ನಾ ಕೇಳಿರುವ ಶಭ್ದ ಎಲ್ಲವೂ ಮಿಶ್ರಣವಾಗಿ ಬರುವುದೇ ಕನಸು.ಹಾಗಿದ್ದೂ ನಾವು ಯಾಕೆ ಈ ತರಹದ ಕನಸನ್ನು ಕಾಣುತ್ತೇವೆ ಎಂಬುವುದಕ್ಕೆ ಡ್ರೀಮ್ ಸ್ಪೆಷಲಿಸ್ಟ್ಗಳು ಎರಡು ರೀತಿಯ ವಿಶ್ಲೇಷಣೆಯನ್ನು ನೀಡುತ್ತಾರೆ . ಅದರಲ್ಲಿ ಮೊದಲನೆಯದು ನಮಿಗೆ ಬಹಳಷ್ಟು ಬೇಕಾದ ಒಬ್ಬ ವ್ಯಕ್ತಿ ನಮಿಗೆ ಮೋಸ ಮಾಡುತ್ತಾನೆ ಎಂದು ನಮ್ಮ ಮನಸ್ಸಿನಲ್ಲಿ ಭಯ ಉಂಟಾದಾಗ ಇಂತಹ ಕನಸು ಬೀಳುತ್ತದೆ. ಮತ್ತೊಂದು ನಾವು ಯಾವುದಾದರೂ ದೊಡ್ಡ ಕೆಲಸವನ್ನು ಪ್ರಾರಂಭಿಸಿದ್ದು ಅದರ ಬಗ್ಗೆ ಅತಿಯಾದ ಚಿಂತನೆ ಇದ್ದರೆ ಇಂತಹ ಕನಸುಗಳು ಅಂದರೆ ಬಹಳಷ್ಟು ಮೇಲಿನಿಂದ ಕೆಳಗೆ ಬಿದ್ದಂತೆ ಕನಸು ಕಾಣುತ್ತದೆ ಎಂದೂ ಹೇಳುತ್ತಾರೆ.
2.ಒಂದು ದೊಡ್ಡ ಜನಸಮೂಹ ಅದರ ನಡುವೆ ನಾವು ನಿಂತಿದ್ದು ಜನರನ್ನು ನೋಡುತ್ತಿರುತ್ತೇವೆ.ತಕ್ಷಣ ನಮ್ಮನ್ನು ನೋಡಿದಾಗ ನಿರ್ವಸ್ತ್ರವಾಗಿ ಇರುತ್ತೇವೆ.
3.ಒಂದು ದೊಡ್ಡ ಎಕ್ಸಾಮ್ ಹಾಲ್ ಅದರಲ್ಲಿ ನಾವು ಕೂತು ಎಕ್ಸಾಮ್ ಬರೆಯುವ ರೀತಿ
ನೀವು ಅಂದುಕೊಂಡಂತೆ ಈ ಕನಸನ್ನು ಹೆಚ್ಚಾಗಿ ಕಾಣುವುದು ವಿಧ್ಯಾರ್ಥಿಗಳು ಆಗಿರುತ್ತಾರೆ.ಆದ್ರೂ ವಿಧ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಹೋಗಲು ಪ್ರಾರಂಭಿಸಿದವರು ಕೂಡ ಈ ರೀತಿ ಕನಸನ್ನು ಕಾಣುತ್ತಾರೆ.ಈ ರೀತಿ ಎಕ್ಸಾಮ್ ಬೆರೆಯುವ ಕನಸನ್ನು ಕಾಣಲು ಕಾರಣವೇನೆಂದು ಕೇಳಿದರೆ ಒಂದು ಎಕ್ಸಾಮ್ ಎಂದರೆ ಬಹುತೇಕ ಸವಾಲಾಗಿರುವ ವಿಷಯವಾಗಿದೆ.ತುಂಬಾ ಕಲೀಬೇಕು ,ಕಲ್ತು ನೆನಪಿಟ್ಟು ಕೇಳಿದ ಪ್ರಶ್ನೆಗೆ ಉತ್ತರಿಸಬೇಕು. ಉತ್ತರ ಪತ್ರಿಕೆ ಮೌಲ್ಯಮಾಪನ ಅಂದರೆ ಮಾರ್ಕ್ ಹಾಕಿ ಬರುವಾಗ ತುಂಬಾ ಉದ್ವೇಗ ಈ ರೀತಿ ತುಂಬಾ ಸವಾಲು ಇರುವ ಒಂದು ವಿಷಯವಾಗಿದೆ ಎಕ್ಸಾಮ್ ಅನ್ನುವಂತದ್ದು. ಇದೇ ರೀತಿ ನಮ್ಮ ಜೀವನದಲ್ಲಿ ಒಂದು ಸವಾಲಾಗಿರುವ(ಚಾಲೆಂಜಿಂಗ್) ವಿಷಯ ನಡೆಯುತ್ತದೆ ಎಂದು ಮೆದುಳು ನಮಿಗೆ ಮುನ್ಸೂಚನೆ ನೀಡುವಂತಹದ್ದು ಈ ರೀತಿ ಕನಸಿನ ರೂಪದಲ್ಲಿ ಬರುತ್ತದೆ ಎಂದು ಕೆಲವು ಡ್ರೀಮ್ specialist ಗಳು ಹೇಳಿದ್ದಾರೆ.
4.ಸಾವು ಸಂಭವಿಸುವುದು.
ಕೆಲವೊಂದು ಬಾರಿ ನಾವು ಸಾಯುವ ರೀತಿಯಲ್ಲಿ ಅಥವಾ ನಮಿಗೆ ಹೆಚ್ಚು ಇಷ್ಟ ಇರುವ ವ್ಯಕ್ತಿಗಳು ಸಾಯುವ ರೀತಿ ಕನಸುಗಳನ್ನು ಕಾಣುತ್ತೇವೆ.ಅನೇಕ ಜನರು ಈ ರೀತಿಯಾಗಿ ಕನಸು ಕಂಡಿದೆ ಎಂದು ಹೇಳಿರಲೂ ಬಹುದು.ಇದರ ಬಗ್ಗೆ ಡ್ರೀಮ್ ಸ್ಪೆಷಲಿಸ್ಟ್ ಹೇಳುವುದೇನೆಂದರೆ ನಾವು ನಮ್ಮ ಜೀವನದಲ್ಲಿ ಏನೋ ಒಂದು ತಪ್ಪು ಮಾಡುತ್ತಿದ್ದೇವೆ . ಮತ್ತು ಅದನ್ನು ನಿಲ್ಲಿಸಲು ಪ್ರಯತ್ನ ಪಡುತ್ತಿದ್ದೇವೆ.ಆದರೆ ನಮ್ಮಿಂದ ಅದನ್ನು ನಿಲ್ಲಿಸಲಾಗದಿದ್ದಾಗ ನಮ್ಮ ಮೆದುಳು ಈ ರೀತಿಯಾದ ಕನಸನ್ನು ತೋರಿಸುತ್ತದೆ.ಅಲ್ಲದೆ ನಾವು ಈ ರೀತಿ ಕನಸು ಕಂಡರೆ ನಾವು ಸಾಯುತ್ತೇವೆ ಅಥ್ವಾ ನಾವು ಇಷ್ಟಪಟ್ಟವರು ಸಾಯುತ್ತಾರೆ ಎಂಬ ಯಾವುದೇ ರೀತಿಯ ಅರ್ಥ ಇಲ್ಲ ಎಂದು ಡ್ರೀಮ್ specialist ಗಳು ವ್ಯಕ್ತಪಡಿಸಿ ಹೇಳಿದ್ದಾರೆ.
5.ಸೆಲೆಬ್ರಿಟಿಗಳೊಂದಿಗೆ ಸಮಯ ಕಳೆಯುವುದು
ನಮಿಗೆ ಯಾವ ಕಾರಣದಿಂದ ಈರೀತಿ ಕನಸು ಕಾಣುತ್ತದೆ ಎಂದು ಕೇಳುವುದಾದರೆ ಡ್ರೀಮ್ ಸ್ಪೆಷಲಿಸ್ಟ್ ಗಳು ಎರಡು ರೀತಿಯ ವಿಶ್ಲೇಷಣೆಯನ್ನು ನೀಡುತ್ತಾರೆ.
ಅದರಲ್ಲಿ ಮೊದಲನೆಯದು ನಿಮಗೆ ಆ ವ್ಯಕ್ತಿ ನಿಂತಿರುವ ಸ್ಥಾನಕ್ಕೆ ತಲುಪಬೇಕು ಎಂದು ಮನಸ್ಸಿನಲ್ಲಿ ಅತಿಯಾದ ಆಸೆ ಇದೆ ಮತ್ತು ಮನಸ್ಸಿನಲ್ಲಿ ಅತಿಯಾಗಿ ಅದರ ಯೋಚನೆ ಮಾಡುತ್ತಿದ್ದೀರಿ ಎಂಬುವುದು ಆಗಿದೆ
ಇನ್ನೊಂದು ವಿಶ್ಲೇಷಣೆ ಪ್ರಕಾರ ಹೇಳುವುದಾದರೆ ಆ ವ್ಯಕ್ತಿಯಲ್ಲಿ ಇರುವ ಯಾವುದೋ ಒಂದು ಪ್ರತಿಭೆ ನಿಮಗೆ ಇಷ್ಟವಾಗಿದೆ ಮತ್ತು ನೀವು ಆ ಪ್ರತಿಭೆ ನಿಮ್ಮಲ್ಲಿ ಇರಬೇಕು ಎಂದು ನೀವು ಅಸೇಪಡುತ್ತೀರಿ.ಉದಾಹರಣೆಗೆ ಸೆಲೆಬ್ರಿಟಿ ಡಾನ್ಸ್ ನಲ್ಲಿ ಬಹಳ ಪ್ರತಿಭೆಯನ್ನು ಹೊಂದಿದ್ದು ನೀವು ಆ ಸೆಲೆಬ್ರಿಟಿ ಜೊತೆ ಇರುವುದಾಗಿ ಕನಸು ಕಂಡರೆ ನಿಮಗೆ ಅವರ ಡಾನ್ಸ್ ತುಂಬಾ ಇಷ್ಟವಾಗಿದೆ ಎಂದೂ ಮತ್ತು ನೀವು ಅವರಂತೆಯೇ ಡಾನ್ಸ್ ಮಾಡಲು ಇಷ್ಟಪಡುತ್ತೀರಿ ಎಂದು ಆಗಿದೆ.
6.ಬಹಳಷ್ಟು ಜನರು ಗುಂಪು ಸೇರಿ ನಿಮ್ಮನ್ನು ಓಡಿಸುವುದು.
ನಿಮ್ಮಲ್ಲಿ ಅನೇಕ ಜನರು ಈ ರೀತಿಯಾದ ಕನಸನ್ನು ಕಂಡಿರಬಹುದು. ಡ್ರೀಮ್ ಸ್ಪೆಷಲಿಸ್ಟ್ ಗಳು ಇದರ ಬಗ್ಗೆ ವಿವರಿಸುವುದು ಏನೆಂದರೆ ಕೆಲವು ದಿವಸಗಳಿಂದ ಯಾವುದೋ ಒಂದು ವಿಷಯಕ್ಕೆ ಹೆದರಿ ನಾವು ಓದುತ್ತಿದ್ದೇವೆ .ಇದನ್ನು ನಿಲ್ಲಿಸಬೇಕು ಎಂದು ನಮ್ಮ ಮೆದುಳು ನಮಿಗೆ ತಿಳಿಸುವುದು ಆಗಿದೆ ರೆ ಕನಸು.
7.ಪಾರ್ಟ್ನರ್ ಚೀಟಿಂಗ್ (ಜೊತೆಗಾರರು ಮೋಸ ಮಾಡಿ ಹೋಗುವುದು)
ಅಂದರೆ ನಮ್ಮ ಗೆಳೆಯರು, ಗರ್ಲ್ಫ್ರೆಂಡ್, boyfriend, ಮುಂತಾದವರು ನಮಿಗೆ ಮೋಸ ಮಾಡಿ ಹೋಗುವ ರೀತಿಯ ಕನಸಾಗಿರುತ್ತದೆ. ನಿಮಗೆ ಕೂಡ ಈ ರೀತಿಯ ಕನಸು ಕಂಡಿರಬಹುದು.ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಕಾಣುವ ಕನಸಾಗಿದೆ ಈ ಪಾರ್ಟ್ನರ್ ಚೀಟಿಂಗ್ ಅನ್ನುವಂಥದ್ದು.ನಮ್ಮ ಪಾರ್ಟ್ನರ್ ನಮ್ಮನ್ನು ಹೆಚ್ಚು ಗಮನಿಸುವುದಿಲ್ಲ ಎಂದು ನಮ್ಮ ಮನಸ್ಸಿಗೆ ತೋಚಿದಾಗ ಈ ರೀತಿಯ ಕನಸು ಕಾಣುತ್ತದೆ.ಮತ್ತೊಂದು ವಿಶ್ಲೇಷಣೆ ಪ್ರಕಾರ ಒಬ್ಬ ವ್ಯಕ್ತಿಗೆ ತನ್ನ ಪಾರ್ಟ್ನರ್ ಸಂಶಯಾಸ್ಪದ ವ್ಯಕ್ತಿ ಆಗಿರುತ್ತಾನೆ ಈ ರೀತಿ ನಿಜ ಜೀವನದಲ್ಲಿ ನಡೆದರೆ ಅದನ್ನು ಅಧಿಜೈಸಿ ಬದುಕಲು ಮೆದುಳು ನಮಿಗೆ ನೀಡುವ ಮುನ್ಸೂಚನೆಯಾಗಿದೆ. ಎಂದು ಅನೇಕ ಡ್ರೀಮ್ ಸ್ಪೆಷಲಿಸ್ಟ್ ಗಳು ತಿಳಿಸಿದ್ದಾರೆ.
8.ಯಾವುದಾದರೂ ಒಂದು ಸ್ಥಳಕ್ಕೆ ಕೊನೆ ನಿಮಿಷದಲ್ಲಿ ಅರ್ಜೆಂಟ್ ಆಗಿ ಓದುವುದು.
ಈ ರೀತಿಯ ಕನಸುಗಳು ಕಾಣುವುದರ ವಿವರಣೆ ನಮಿಗೆ ಸಾಧ್ಯವಾಗುವುದಕ್ಕಿಂತ ಆಚೆಗೆ ಅಂದರೆ ನಮ್ಮಿಂದ ಸಾಧ್ಯವಾಗದ ವಿಷಯಕ್ಕೆ ನಾವು ಮಾತು ಕೊಡುವ ಸಂದರ್ಭದಲ್ಲಿ ಈ ರೀತಿಯ ಕನಸನ್ನು ಕಾಣುವುದು.
ಉದಾಹರಣೆಗೆ ನಾವು ಯಾವುದಕ್ಕಾದರೂ ಒಂದು ವಿಷಯಕ್ಕೆ ಮಾತು ಕೊಡುತ್ತೇವೆ ಆದರೆ ಅದು ನಮ್ಮಿಂದ ಸಾಧ್ಯವಿಲ್ಲ ಎಂದು ನಮ್ಮ ಆಲ ಮನಸ್ಸಿಗೆ ತಿಳಿದಿರುತ್ತದೆ .ಈ ರೀತಿಯ ಸಂಧರ್ಬದಲ್ಲಿ ನಾವು ತುರ್ತಾಗಿ ಒಂದು ಪ್ರದೇಶಕ್ಕೆ ಓದುವ ಕನಸನ್ನು ಕನುವಂಥದ್ದು.ಎಂದು ವಿಶ್ಲೇಷಿಸಲಾಗುತ್ತದೆ.
9. ನಾವು ಆಕಾಶದಲ್ಲಿ ಹಾರುವ ರೀತಿ
ನಾವು ಕೆಲವು ವಿಷಯಗಳಿಗೆ ಪ್ಲಾನ್ ಮಾಡಿದ್ದು ಆ ಕೆಲಸಗಳೆಲ್ಲ ನಾವು ಅಂದುಕೊಂಡಂತೆ ನಡೆಯಬೇಕು ಎಂಬ ಸ್ವಾರ್ಥ ನಮ್ಮಲ್ಲಿದ್ದರೆ ಈ ರೀತಿಯಾದ ಕನಸು ಕಾಣುತ್ತದೆ.ನಮಿಗೆ ಆಸೆ ಇರಬೇಕು but ಸ್ವಾರ್ಥ ಯಾವತ್ತೂ ಇರಬಾರದು. ಎಲ್ಲ ಕೆಲಸಗಳು ಅದರಷ್ಟಕ್ಕೆ ನಡೆಯಬೇಕು ಎಂದು ತಿಳಿಸುವುದಾಗಿದೆ ಈ ಕನಸು ಎಂದು ಈ ಕನಸಿನ ವಿಶ್ಲೇಷಣೆಯನ್ನು ಡ್ರೀಮ್ ಸ್ಪೆಷಲಿಸ್ಟ್ ಗಳು ನೀಡಿದ್ದಾರೆ.
10.ಒಬ್ಬ ವ್ಯಕ್ತಿ ಆಯುಧಗಳನ್ನು ಹಿಡಿದು ನಮ್ಮನು ಓಡಿಸುವುದು.
ಈ ರೀತಿ ಕನಸು ಕಂಡರೆ ನಮ್ಮ ಶತ್ರು ನಮ್ಮನ್ನು ಕೊಳ್ಳಲು ಕಾಯುತ್ತಿದ್ದಾನೆ ಎಂದಲ್ಲ . ನಮ್ಮ ಮನಸ್ಸಿನಲ್ಲಿ ಚಿಕ್ಕ ಚಿಕ್ಕ ತೊಂದರೆಗಳು ಇರುವುದರಿಂದ ಈ ರೀತಿಯ ಕನಸು ಕಾಣುತ್ತದೆ.ಉದಾಹರಣೆಗೆ ಆ ವ್ಯಕ್ತಿ ನಾನು ಅಂದುಕೊಂಡಂತೆ ಮಾಡಲಿಲ್ಲ ಅಲ್ವಾ ? ಎಂಬಂತೆ ಚಿಕ್ಕ ಚಿಕ್ಕ ತೊಂದರೆಗಳು ನಮ್ಮ ಮನಸ್ಸಿನಲ್ಲಿ ಇದ್ದಾಗ ನಮಿಗೆ ಈ ರೀತಿ ಒಬ್ಬ ವ್ಯಕ್ತಿ ಆಯುಧ ಹಿಡಿದು ನಮ್ಮನ್ನು ಓಡಿಸುವ ರೀತಿ ಕನಸು ಕಾಣುವುದು ಎಂದು ಅನೇಕ ಡ್ರೀಮ್ ಸ್ಪೆಷಲಿಸ್ಟ್ ಗಳು ತಿಳಿಸಿದ್ದಾರೆ.
Conclusion
ನಾವು ಎಷ್ಟು ಕಲಿಯುತ್ತೀವಿ ಅಷ್ಟೇ ಇಂಟ್ರೆಸ್ಟಿಂಗ್ ಅದ ವಿಷಯವಾಗಿದೆ ಈ ಕನಸು ಅನ್ನುವಂಥದ್ದು . ಇಲ್ಲಿ ತಿಳಿಸಿರುವ ಯಾವುದೇ ವಿಷಯಗಳು ವೈಜ್ಞಾನಿಕವಾಗಿ ಸಾಬೀತು ಆಗಲಿಲ್ಲ . ಕೆಲವೊಂದು ಡ್ರೀಮ್ ಸ್ಪೆಷಲಿಸ್ಟ್ ಗಳು ನೀಡಿದ ವಿವರಣೆಯ ಪ್ರಕಾರ ತಿಳಿಸಲಾಗಿದೆ.ಎಲ್ಲರಿಗೂ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ
ಧನ್ಯವಾದಗಳು.
It is extraordinary 🔥🔥
ReplyDelete🥰💖
Delete🔥 awsm
ReplyDelete