Skip to main content

Israel-Palestine-conflict .ಇದು ಮೂರನೇ ಮಹಾಯುದ್ಧದ ಆರಂಭವೇ? ನಾವು ಭಯಪಡಬೇಕೇ?

 

 Israel-Palestine-conflictಕಳೆದ ಕೆಲವು ದಿನಗಳಿಂದ ನಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ತುಂಬಿರುವುದು #SaveIsrail #SavePalestine ಈ ಎರಡು ವಾಕ್ಯಗಳು ಆಗಿರುತ್ತದೆ.
ಸತ್ಯದಲ್ಲಿ ಇಲ್ಲಿ ಯಾರೂ ಸರಿ ಯಾರು ಉಪದ್ರವಿಸುವವರು , ಯಾಕೆ ನಿರಪರಾಧಿಗಲಾದ ಸ್ತ್ರೀ ಹಾಗೂ ಮಕ್ಕಳನ್ನು ಕೊಲ್ಲುತ್ತಿರುವುದು,ಇದು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದೇ ಎಂಬುದರ ಕುರಿತು ಚರ್ಚಿಸಲಿದ್ದೇವೆ.

Israel-Palestine-conflict ಆರಂಭವಾದದ್ದು ನಿನ್ನೆಯೋ ಮೊನ್ನೆಯೋ ಅಲ್ಲ. ನೂರಾರು ವರ್ಷಗಳ ಹಿಂದಿನಿಂದಲೇ ಇವರ ಸಂಘರ್ಷ ಇದೇ. ಸರಿಯಾಗಿ ಹೇಳಬೇಕಾದರೆ ನೂರು ವರ್ಷ ಹಿಂದಿನಿಂದ ಆದರೂ ತಿಳಿಯಬೇಕಾಗಿದೆ. 


History of Israel-Palestine-conflict
  
        1517-1917 ವರೆಗಿನ 400 ವರ್ಷಗಳ ಕಾಲ ಫಲೆಸ್ತೀನ್ ಅನ್ನು ಆಳ್ವಿಕೆ ಮಾಡುತ್ತಿದ್ದದ್ದು ಆಟೋಮನ್ ಸಾಮ್ರಾಜ್ಯ ಆಗಿತ್ತು. ಭಾರತವನ್ನು ಬ್ರಿಟೀಷರು ವಶಕ್ಕೆ ಪಡೆದ ಹಾಗೆ 1917 ನಲ್ಲಿ ಬ್ರಿಟೀಷರು ಅಟೋಮನ್ ಸಾಮ್ರಾಜ್ಯವನ್ನು ಸೋಲಿಸಿ ಫಲಾಸ್ತಿನ್ ಅನ್ನು ತಮ್ಮ ವಶಕ್ಕೆ ಪಡೆದು ಕೊಳ್ಳುತ್ತಾರೆ. ಸಮಯದಲ್ಲಿ ಫಲಸ್ತಿನ್ ನಲ್ಲಿ ಇದ್ದಲ್ಲು ಮುಸ್ಲಿಮ್ ಗಳು ಅದೇ ರೀತಿ ಕ್ರೈಸ್ಥರು ಹಾಗೂ ಯಹೂದಿಗಳು ಆಗಿದ್ದರು. ಈ ಮೂರು ವಿಭಾಗದವರು ಪುರಾತನ ಅಥವಾ ಪುಣ್ಯ ಪುರಾತನ ಸ್ಥಳವಾಗಿ ಕಂಡದ್ದು ಫಲೆಸ್ತಿನ್ ನ ಒಳಗೆ ಇರುವ ಜೆರುಸಲೇಮ್ ಆಗಿತ್ತು.ಯಹೂದಿಗಳು ಪುಣ್ಯ ಭೂಮಿಯಾಗಿ ಕಾಣುವುದು ಜೆರುಸಲೇಮ್,ಹಾಗೆ ಕ್ರೈಸ್ತರು ಎಸು ಹುಟ್ಟಿದ  ಸ್ಥಳ ಎಂದು ಹೇಳುವುದು ಜೆರುಸಲೇಮ್,ಅದೇ ರೀತಿ ಮುಸಲ್ಮಾನರಿಗೆ ಮಕ್ಕ ಮದೀನಾ ಬಿಟ್ಟರೆ ನಂತರದ ಪುಣ್ಯ ಸ್ಥಳ ಅಂದರೆ ಜೆರುಸಲೇಮ್ ನಲ್ಲಿ ಇರುವ masjidul aqsa ಎಂದು ಕರೆಯಲ್ಪಡುವ ಮಸ್ಜಿದ್.ಈಗ ಮುಸಲ್ಮಾನರು ಮಕ್ಕಾದ ಡೈರೆಕ್ಷನ್ ನೋಡಿ ನಮಾಝ್ ಮಾಡುವುದಾದರೆ ಕೆಲವು ಕಾಲಗಳ ಹಿಂದೆ ಅವರು ನಮಾಝ್ ಮಾಡುತ್ತಿದ್ದದ್ದು masjidul aqsa ದ ಡೈರೆಕ್ಷನ್ ಗೆ ಆಗಿತ್ತು.ನಿಖರವಾಗಿ ಹೇಳಬೇಕಾದರೆ ಕ್ರಿ.ಶ 624 ರಿಂದ 16-17 ವರ್ಷಗಳ ವರೆಗೆ ಆ ಡೈರೆಕ್ಷನ್ ಗೆ ಆಗಿತ್ತು ಪ್ರತಿಯೊಬ್ಬ ಮುಸಲ್ಮಾನ ನಮಾಝ್.ಆದ್ದರಿಂದ ಮೂರು ಧರ್ಮಗಳು ಬಹಳ ಮುಖ್ಯವಾಗಿ ಕಾಣುವ ಸ್ಥಳವಾಗಿತ್ತು ಜೆರುಸಲೇಮ್.ಹಾಗೆ ಯಾವ ತೊಂದರೆಯೂ ಇಲ್ಲದೆ ಬ್ರಿಟೀಷರ ಆಳ್ವಿಕೆ ಫಲಾಸ್ತೀನ್ ನಲ್ಲಿ ಮುಂದುವರಿಯುತ್ತಿತ್ತು.

                ಹಾಗಿರಬೇಕಾದರೆ ಆ ಸಮಯದಲ್ಲಿ ಒಂದನೇ ಮಹಾಯುದ್ದ ಹಾಗೂ ಎರಡನೇ ಮಹಾಯುದ್ಧ ನಡೆಯುತ್ತದೆ.ಈ ಎರಡು ಯುದ್ಧಗಳು ನಡೆಯಬೇಕಾದರೆ ಅದರಲ್ಲಿ ಹೆಚ್ಚು ಭಾಡಿಸಲ್ಪಟ್ಟವರು ಯಹೂದಿಗಳು ಎಂಬುವುದು ನಮಗೆಲ್ಲ ಗೊತ್ತು.ಹೀಗೆ ಸಂಭವಿಸಿರುವುದರಿಂದ ಯೂರೋಪ್ ನಿಂದ ಅನೇಕ ಯಹೂದಿಗಳು ಫಲಾಸ್ತೀನ್ ಗೆ ಅಭ್ಯರ್ಥಿಗಳಾಗಿ ವಾಸಿಸಲು ಬರುತ್ತಾರೆ. ಫಲಾಸ್ತೀನ್ ನಲ್ಲಿ ಯಹೂದಿಗಳ ಸಂಖ್ಯೆ ಹೆಚ್ಚಾಗಲು ಕಾರಣ ಇದಾಗಿತ್ತು.ಹಾಗೆ ಒಂದನೇ ಮಹಾಯುದ್ದ ನಡೆಯಿತು ಎರಡನೇ ಮಹಾಯುದ್ದ ನಡೆಯಿತು ಕಾಲ ಮುಂದೆ  ಹೋಗಿ 1947ರಲ್ಲಿ ಫಲಾಸ್ತೀನ್ ಅನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಮಾಡಲು ಬ್ರಿಟಿಷ್ ಸರ್ಕಾರ ತೀರ್ಮಾನಿಸುತ್ತಾರೆ.ಹಾಗಿರಬೇಕದರೆ ಫಲಾಸ್ತೀನ್ ನಲ್ಲಿ ಇರುವ ಯಹೂದಿಗಳು ನಮ್ಮಂತ ಯಹೂದಿಗಳಿಗೆ ಒಂದು ಸ್ವತಂತ್ರ ರಾಷ್ಟ್ರ ಬೇಕೆಂದು ಬ್ರಿಟೀಷರಲ್ಲಿ ಯಹೂದಿಗಳು ಬೇಡಿಕೆ ಇಡುತ್ತಾರೆ.ಭಾರತದಿಂದ ಬ್ರಿಟೀಷರು ಹೋಗುವಾಗ ಭಾರತವನ್ನು ಪಾಕಿಸ್ತಾನ ಮತ್ತು ಭಾರತ ಎಂಬ ಎರಡು ವಿಭಾಗಗಳನ್ನು ಮಾಡಿದಂತೆ ಫಲಾಸ್ತೀನ್ ಅನ್ನು ಎರಡು ವಿಭಾಗಗಳನ್ನಾಗಿ ಮಾಡಬೇಕು ಎಂಬುವುದು ಆಗಿತ್ತು ಅವರ ಬೇಡಿಕೆ. ಮುಖ್ಯ ಗುರಿ ಏನೆಂದರೆ ಜೆರುಸಲೇಮ್ ಎನ್ನುವ ಪುಣ್ಯ ಸ್ಥಳ ತಮ್ಮದಾಗಬೇಕು ಎನ್ನುವುದಾಗಿತ್ತು.ಅದೇ ರೀತಿ ಬ್ರಿಟೀಷರು ಯಾವ ಜಗಳಗಳು ಆಗದಂತೆ ಫಲಾಸ್ತೀನ್ ಅನ್ನು ಎರಡು ವಿಭಾಗಗಳನ್ನಾಗಿ ಮಾಡಿ ಇಸ್ರೇಲ್ ಫಲಾಸ್ತೀನ್ ಮಾಡಿದರು. ಈಗ ಬರುವ ಪ್ರಶ್ನೆ ಜೆರುಸಲೆಮ್ ಏನಾಯ್ತು? ಅನ್ನೋದು. ಹೌದು ಜೆರುಸಲೆಮ್ ನ ಪಶ್ಚಿಮ ಭಾಗವನ್ನು ಫಲಾಸ್ತೀನ್ ಗೆ ಹಾಗೂ ಪೂರ್ವ ಭಾಗವನ್ನು ಇಸ್ರೇಲ್ ಗೆ ನೀಡಿದರು.

Israel-Palestine-conflict

         ಹೇಗಿದ್ದರೂ ಬ್ರಿಟೀಷರು ಈ ರೀತಿಯಾದ ವಿಭಜನೆ ಮಾಡಿರುವುದರಿಂದ  ಕೆಲ ಕಾಲಗಳ ನಂತರ ಅಲ್ಲಿ ಅನೇಕ ರೀತಿಯ ತೊಂದರೆಗಳಿಗೆ  ಆ ಸಮೂಹ ಒಳಗಾಗುತ್ತದೆ.ಪರಸ್ಪರ ಅನೇಕ ರೀತಿಯ ಸಂಘರ್ಷಗಳು (Israel-Palestine-conflict)ಆ ಎರಡು ರಾಜ್ಯಗಳಲ್ಲಿ ಉಂಟಾಗುತ್ತದೆ ಹಾಗೂ ಅದೇರೀತಿ ದೊಡ್ಡದೊಡ್ಡ ಜಗಳಗಳಿಗೆ ಅದು ದಾರಿ ಕೂಡ ಆಯಿತು.ಹೀಗಿರುವ ಸಂಧರ್ಬ ದಲ್ಲಾಗಿದೆ ಅರಬ್ ರಾಷ್ಟ್ರಗಳು ಅಂದರೆ ಈಜಿಪ್ಟ್ ಇರಾನ್ ನಂತಿರುವ ಅರಬ್ ರಾಷ್ಟ್ರಗಳು ಫಲಾಸ್ತೀನ್ನೊಂಡಿಗೆ ಸೇರಿಕೊಂಡು ಹೊಸದಾಗಿ ನಿರ್ಮಿಸಿದ ಇಸ್ರೇಲ್ ನ ಮೇಲೆ ದಾಳಿ ಮಾಡಲು ಬರುವುದು ಹಾಗೂ ಯುದ್ಧ ನಡೆಯುವುದು. ಹಾಗಿದ್ದೂ ಫಲಾಸ್ತೀನ್ ಮತ್ತು ಜೊತೆ ರಾಷ್ಟ್ರಗಳು ಬಹಳ ದೊಡ್ಡ ಸೊಳನ್ನಪ್ಪುತ್ತಾರೆ ಮತ್ತು ಫಲಾಸ್ತೀನ್ನ ಬಹಳಷ್ಟು ಮಣ್ಣು ಇಸ್ರೇಲ್ ನ ಪಾಲಾಗುತ್ತದೆ.ಫಲಾಸ್ತೀನ್ ಬಹಳ ಕಿರಿದಾದ ದೇಶವಾಗಿ ಬಿಡುತ್ತದೆ.ಹೀಗೆ ಯುದ್ದ ಮಾಡಿ ಮತ್ತು ಮತ್ತು ಫಲಾಸ್ತೀನ್ ನ ಪ್ರದೇಶ ವನ್ನ ಇಸ್ರೇಲ್ ವಶಕ್ಕೆ ಪಡೆದು ಕೊಳ್ಳುತ್ತದೆ .ಅಲ್ಲದೆ ಜೆರುಸಲೆಮ್ ಜೊತೆಗೆ ವೆಸ್ಟ್ ಬ್ಯಾಂಕ್ ಎಂಬ ಪ್ರದೇಶಗಳಿಗೆ ಯಹೂದಿ ಕುಟುಂಬಗಳನ್ನು ಕಳಿಸಿ ಅಲ್ಲಿ ಅವರಿಗೆ ಉತ್ತಮ ಜೀವನ ಸೌಕರ್ಯವನ್ನು ನೀಡಿ ಮೆಲ್ಲನೆ ಆ ಸ್ಥಳವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಪ್ರಯತ್ನ ಮಾಡಿದರು.ಈ ಒಂದು ಕಾರಣದಿಂದಲೇ ಎರಡು ದೇಶದ ಪ್ರಾದೇಶಿಕ ಜನರ ಮಧ್ಯೆ ಅನೇಕ ದ್ವೇಷ ವಿದ್ವೇಶ ಗಳು ಉಂಟಾಯ್ತು. ಫಲಾಸ್ತೀನ್ ಜನ ಹೇಳುವಂತಹದ್ದು ನಮ್ಮ ಭೂಮಿಯನ್ನು ಇಸ್ರೇಲ್ ವಶಪಡಿಸಿ ಕೊಳ್ಳಲಾಗುತ್ತಿದೆ ಎಂದು.ಆದರೆ ಇಸ್ರೇಲ್ ಜನ ಹೇಳುವಂತೆ ನಮಿಗೆ ಬದುಕಲು ಇರುವ ಇಸ್ರೇಲ್ ಎಂಬ ಈ ಭೂಮಿಯಿಂದ ನಮ್ಮನ್ನು ಓಡಿಸಲು ಫಲಾಸ್ತೀನ್. ಜನ ಪ್ರಯತ್ನಿಸುತ್ತಿದ್ದಾರೆ ಎಂದು.

          1948 ರಾಲ್ಲಿ ಆರಂಭವಾದ ಈ ಸಂಘರ್ಷ (Israel-Palestine-conflict)ಇವತ್ತಿಗೆ ತಲುಪಿರಬೇಕಾದರೆ ಫಲಾಸ್ತೀನ್‌ನ ಭೂಮಿ ಕಡಿಮೆಯಾಗುತ್ತಾ ಬರುತ್ತಿದೆ .



Israel-Palestine-conflict


   ‌.        ನಿಖರವಾಗಿ ಭೂಪಟ ನೋಡುವಾಗ ಇಲ್ಲಿ ಕಾಣುವ ಹಳದಿ ಬಣ್ಣದ ಸ್ಥಳ ಇಸ್ರೇಲ್ ಹಾಗೂ ಪಿಂಕ್ ಬಣ್ಣದ ಭಾಗ ವೆಸ್ಟ್ ಬ್ಯಾಂಕ್ (west bank)ಎಂಬ ಫಲಾಸ್ತೀನ್ ನ ಪ್ರದೇಶದ್ದು ಅದನ್ನು ಆಳುವಂತದ್ದು ಇಸ್ರೇಲ್ ಗವರ್ನಮೆಂಟ್ ಆಗಿದೆ.ಅದರಲ್ಲಿ ಕಾಣುವ ಹಸಿರು ಬಣ್ಣದ ಭಾಗ ಮಾತ್ರ ಫಲಾಸ್ತೀನ್ ಗವರ್ನಮೆಂಟ್ ನಾ ಅಧೀನದಲ್ಲಿರುವಂತದ್ದು.ಇನು ಎಡ ಭಾಗದಲ್ಲಿ ನೋಡುವಾಗ ನಮಿಗೆ ಗಾಝಾ ಸ್ಟ್ರಿಪ್ ಕಾಣುತ್ತದೆ ಅದನ್ನು ಆಳುತ್ತಿರುವುದು ಹಮಾಸ್ ಎಂದು ಕರೆಯಲ್ಪಡುವ indipendent militant political group ಆಗಿರುತ್ತದೆ.  ಹಮಾಸ್ ಅನ್ನು ಅಮೆರಿಕ ಇಸ್ರೇಲ್ ಮತ್ತು ಕೆಲವು ಯೂರೋಪ್ ದೇಶಗಳು ಭಯೋತ್ಪಾದಕರಂತೆ ನೋಡುತ್ತದೆ ಆದರೆ ಚೀನಾ ಮತ್ತು ಇರಾನ್ ನಂತಹ ದೇಶಗಳು ರಾಜಕೀಯ ಪಕ್ಷವಾಗಿ ಮಾತ್ರ ನೋಡುತ್ತದೆ. ಇದರ ಬಗ್ಗೆ ತಿಳಿದುಕೊಳ್ಳೋಣ.

About Gaza 

           ಗಾಝಾ ಎಂಬ ಈ ಪ್ರದೇಶವನ್ನು ಒಂದು ಭಾಗದಲ್ಲಿ ಇಸ್ರೇಲ್ ಹಾಗೂ ಮತ್ತೊಂದು ಭಾಗದಲ್ಲಿ ಈಜಿಪ್ಟ್ ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದೆ.ಮತ್ತು ಇಲ್ಲಿ ನಿರುದ್ಯೋಗದ ಸಮಸ್ಯೆಯೂ ಬಹಳ ಇದೆ,ಆದ್ದರಿಂದಲೇ ಗಾಝಾ ದಲ್ಲಿ ಇರುವ ಒಂದೊಂದು ಯುವಕರಿಗೂ ಬಂದೂಕುಗಳನ್ನು ನೀಡಿ ತಮ್ಮೊಂದಿಗೆ ಸೇರಿಸುವ ಕೆಲಸವನ್ನು ಹಮಾಸ್ ಗ್ರೂಪ್ ಮಾಡುತ್ತಿದೆ.ಆದ್ದರಿಂದಲೇ ಅವರು ಈ ತರಹದ ಕೆಲಸಗಳನ್ನು ಮಾಡಲು ಮತ್ತು ಬಹಳ ದೊಡ್ಡ ಸುರಂಗವನ್ನು ಇಸ್ರೇಲ್ ಗೆ ತೊಡುವ ಕೆಲಸವನ್ನು ಮದುದರಲ್ಲಿ ಸಮಯ ಉಪಯೋಗಿಸುವುದು.ಇನು ಇವತ್ತಿನ ಚರ್ಚೆಯ ವಿಷಯಕ್ಕೆ ಬರೋಣ.


Reallity of Israel-Palestine-conflict

       ವೆಸ್ಟ್ ಬ್ಯಾಂಕಿನ ಜೆರುಸಲೇಮ್ ನ ಪೂರ್ವಕ್ಕೆ ಶೇಖ್ ಜೇರಾ ಎಂಬ ಪ್ರದೇಶವಿದೆ.ಅಲ್ಲಿಂದ ಅಲ್ಲಿನ ಫಲೆಸ್ತೀನ್ ಜನತೆಯನ್ನು ಸ್ಥಳ ಖಾಲಿ ಮಾಡಲು ಆದೇಶವನ್ನು ಹೊರಡಿಸಲಾಗುತ್ತದೆ. ಈ ಒಂದು ಸಂಧರ್ಬದಲ್ಲಿ ಆ ಆದೇಶವನ್ನು ಫಲೆಸ್ತೀನ್ ಜನತೆ ವಿರೋಧಿಸಿತು.ಅದರಿಂಗ್ ಇಸ್ರೇಲ್ ಪೊಲೀಸರು ಹಾಗೂ ಫಲೆಸ್ತೀನ್ ಜನರ ನಡುವೆ ಅನೇಕ ಕಲಹಗಳು ಉಂಟಾಗುತ್ತದೆ ಮತ್ತು ಅದು ತಟಸ್ಥ ಸ್ಥಿತಿಗೆ ಬರುತ್ತದೆ. ತದನಂತರ ಮೇ 10 ರಂದು masjidul aqsa ದಲ್ಲಿ ನಮಾಝ್ ಮಾಡುವ ಸಂಧರ್ಬದಲ್ಲಿ ಇಸ್ರೇಲ್ ಸೈನಿಕರು ದಾಳಿಯನ್ನು ಮಾಡುತ್ತಾರೆ.(at the bigining of Israel-Palestine-conflict)ಅಲ್ಲಿದ್ದ ನೂರಾರು ಜನ ನಿರಪರಾಧಿಗಳನ್ನು ರಬ್ಬರ್ ಬುಲೆಟ್ ಹಾರಿಸುದರ ಮೂಲಕ ಅವರನ್ನು ಓಡಿಸುತ್ತಾರೆ.ಅದರ ಬಗ್ಗೆ ಅವರಲ್ಲಿ ಪ್ರಶ್ನಿಸಿದಾಗ ಅವರು ಹೇಳಿದ್ದು ಕಲಹಗಳು ಉಂಟುಮಾಡುವ ಜನರ ನಾಯಕರು ಅವರ ಮಧ್ಯೆ ಸೇರಿದ್ದಾರೆ ಅದಕ್ಕೆ ನಾವು ದಾಳಿ ಮಾಡಿರುವಂಥದ್ದು ಎಂದು.ಇದರಿಂದ ಫಲೆಸ್ತೀನ್ ಮಾತ್ರವಲ್ಲದೆ ನೆರೆ ಪ್ರದೇಶ ಗಾಝಾ ದ ಹಮಾಸ್ ಎಂಬ ಗುಂಪು ಬಹಳ ಕ್ರೋಧಿತಗೊಳ್ಳುತ್ತದೆ.ಮತ್ತು "ಇಸ್ರೇಲ್ ಸೈನಿಕರು masjidul aqsa ವನ್ನೂ ಬಿಟ್ಟು ಹೋಗಿಲ್ಲ ಅಂದರೆ ಇಸ್ರೇಲ್ ಮೇಲೆ ನಾವು ಮಿಸೈಲ್ ದಾಳಿ ಮಾಡುತ್ತೇವೆ" ಎಂದು ಅವರು ಆದೇಶ ಹೊರಡಿಸುತ್ತಾರೆ ಮತ್ತು ಕೆಲವೇ ಗಂಟೆಗಳಲ್ಲಿ ಸಾವಿರಾರು ಮಿಸೈಲ್ ಗಳನ್ನು ಇಸ್ರೇಲಿನ ಮೇಲೆ ದಾಳಿ ಮಾಡುತ್ತಾರೆ.ಇಸ್ರೇಲ್ ನ ರಕ್ಷಣಾ ವ್ಯವಸ್ಥೆಯ ಬಗ್ಗೆ ಹೇಳಬೇಕಾದರೆ ಬಹಳ ಶಕ್ತವಾದ ರಕ್ಷಣಾ ವ್ಯವಸ್ಥೆಯಾಗಿತ್ತು ಇಸ್ರೇಲ್ ನಲ್ಲಿ ಇದ್ದದ್ದು. Iron dom ಎಂಬ ಸಂವಿಧಾನವನ್ನು ಹೇಳಬೇಕಾಗಿದೆ . ಗಾಝಾ ದಿಂದ ಸಾವಿರಾರು ಮಿಸೈಲ್ ದಾಳಿ ಮಾಡುವಾಗ iron dom ಎಂಬ ವ್ಯವಸ್ಥೆಯು ಮತ್ತೊಂದು ಮಿಸೈಲ್ ಅನ್ನು ಕಳಿಸಿ ಅದನ್ನು ಆಕಾಶದಲ್ಲಿ ಸ್ಪೋಟವಾಗುವಂತೆ ಮಾಡಿ ಇಸ್ರೇಲ್ ಗೆ ಯಾವುದೇ ರೀತಿಯ ತೊಂದರೆ ಆಗದಂತೆ ತಡೆದಿದೆ. ಆದರೂ ಕೂಡ ಅದರಲ್ಲಿ ಕೆಲವೊಂದು ಮಿಸೈಲ್ ಗಳು ಕೆಳಗೆ ಬಿದ್ದು 4 ಸಾವು ಉಂಟಾಗಿದೆ.ಈ ಒಂದು ಘಟನೆಯಿಂದ ಇಸ್ರೇಲ್ ಬಹಳ ದೊಡ್ಡ ರೀತಿಯಲ್ಲಿ ಇಸ್ರೇಲ್ ಮೇಲೆ ದಾಳಿ ಮಾಡಲು ತೀರ್ಮಾನಿಸುತ್ತಾರೆ.

         ಅವರ ಮೊದಲ ಗುರಿ ಇದ್ದದ್ದು ಎಲ್ಲಿಂದ ಮಿಸೈಲ್ ಬಂದಿತೋ ಆ ಸ್ಥಳವನ್ನು ಸಂಪೂರ್ಣವಾಗಿ ನಾಶಮಾಡುವುದಾಗಿತ್ತು. ಆದರೆ ಅಲ್ಲೊಂದು ತೊಂದರೆ ಆಗಿದೆ .ಹಮಾಸ್ ಗುಂಪು ನಾಶವಾಗುತ್ತದೆ ನಿಜ ಆದರೆ ಅಲ್ಲಿರುವ ಇನು ಅರಿಯದ ಮುಗ್ಧ ಹೆಂಗಸರು ಮತ್ತು ಮಕ್ಕಳು ಸತ್ತು ಬೀಳುತ್ತಿದ್ದರು.ಅದನ್ನು ಪ್ರಶ್ನಿಸಿದಾಗ ಎರಡು ದೇಶಗಳು ಅವರವರ ನ್ಯಾಯವನ್ನು ಹೇಳುತ್ತಾರೆ.ಇಸ್ರೇಲ್ ಹೇಳುವುದು ಅವರು ನ ಮೇಲೆ ದಾಳಿ ಮಾಡಿರುವುದರಿಂದ ನಾವು ದಾಳಿ ಮಾಡಿರುವುದು ಎಂದು ಆದರೆ ಹಮಾಸ್ ಗುಂಪು ಹೇಳುವುದು masjidul aqsa ದಾಲ್ಲಿ ನಮಾಝ್ ಮಾಡುತ್ತಿದ್ದ ಮುಗ್ಧ ಜನರ ಮೇಲೆ ಅವರು ಆಕ್ರಮಣ ಮಾಡಿರುವುದರಿಂದ ನಾವು ದಾಳಿ ಮಾಡಿರುವುದು ಎಂದು.ಅದು ಹೇಗಿದ್ದರೂ ಇಲ್ಲಿ ಎರಡು ದೇಶಗಳ ನಡುವೆ ಬಲಿಯಾಗುವುದು ಸಾಧಾರಣ ಮುಗ್ಧ ಜನರು ಆಗಿರುತ್ತಾರೆ. ಇಲ್ಲಿ ಮುಖ್ಯವಾದ ವಿಷಯ ಏನೆಂದರೆ ಈ ಯುದ್ದಕ್ಕೂ ಫಲೆಸ್ತೀನ್ ಗೂ ಯಾವುದೇ ಸಂಭಂದ ಇಲ್ಲ ಎಂಬುವುದಗಿದೆ.ಎಲ್ಲದಕ್ಕೂ ಕಾರಣ ಹಮಾಸ್ ಎಂಬ ಸಾಂಗವಾಗಿದೆ. ಯೂರೋಪಿಯನ್ ಗವರ್ನೆಂಟ್ ಹೇಳುವುದು ಏನೆಂದರೆ ಇಸ್ರೇಲ್ ಮಾಡುತ್ತಿರುವುದು ತಪ್ಪು ಎಂದಾಗಿದೆ.ಏಕೆಂದರೆ ಅಷ್ಟೊಂದು ಬಲಶಾಲಿಯಾದ ಇಸ್ರೇಲ್ ಸೈನ್ಯಕ್ಕೆ ಹಮಾಸ್ ಎಂಬ ಗುಂಬನ್ನು ಸೋಲಿಸುವುದು ಒಂದು ವಿಷಯವೇ ಅಲ್ಲ . ಆದರೆ ಅವರು ಮಾಡುತ್ತಿರುವುದು ಹಮಾಸ್ ಗ್ರೂಪನ ಜನ ಇರುವ ಸ್ಥಳವನ್ನು ಸಂಪೂರ್ಣವಾಗಿ ನಾಶ ಮಾಡುವುದಾಗಿದೆ.

Finally Israel-Palestine-conflict

ಹೇಗಿದ್ದರೂ ಎರಡು ದೇಶಗಳ ನಡುವೆ ಬಲಿಯಾಗುವುದು ಮಾತ್ರ ಬಡಪಾಯಿ ಜನರಗಿರುತ್ತಾರೆ.ಈಗ ತಿಳಿದು ಬಂದ ವಿಷಯ ಏನೆಂದರೆ ಇರಾನ್ ಫಲೆಸ್ತೀನ್ಅನ್ನು ಸಹಾಯ ಮಾಡಲು ಬರುತ್ತಿದ್ದಾರೆ ಎಂದು.ಹಾಗೆ ಎಲ್ಲ ದೇಶಗಳು ಸಹಾಯ ಮಾಡಲು ಬಂದರೆ ಅಲ್ಲಿ ಮೂರನೇ ಮಹಾಯುದ್ಧ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಎಲ್ಲ ವಿಷಯ ಅರ್ಥವಾಯಿತು ಎಂದು ಭಾವಿಸುತ್ತೇನೆ ಧನ್ಯವಾದಗಳು.

Comments

Post a Comment

Popular posts from this blog

THE SURVIVAL STOR JULIANE KOEPCKE ||10000 ಅಡಿ ಮೇಲಿನಿಂದ ಬಿದ್ದು ಬ್ದುಕಿ ಉಳಿದ ಹೆಣ್ಣು.

Story of Juliane koepcke ಯಾರಾದರೂ ವಿಮಾನದಿಂದ ಪ್ಯಾರಶೂಟ್ ಇಲ್ಲದೆ ಹಾರಿದರೆ ಅವರು ಸಾಯುವುದು ನಿಸ್ಸಂಶಯ. ಆದರೆ ಹಾರಾಡುತ್ತಿರುವ ವಿಮಾನದಿಂದ 10000 ಅಡಿ ಎತ್ತರದಿಂದ ಅಮೆಜಾನ್ ಕಾಡಿನ ಒಳಗೆ ಬಿದ್ದು ಅಲ್ಲಿನ ವನ್ಯ ಜೀವಿಗಳ ಎಡೆಯಿಂದ ಬದುಕಿಬಂದ ಕ್ಲಿಯರ್ ಆಗಿ ಹೇಳ್ಬೇಕು ಅಂದ್ರೆ ಸಾವನ್ನೇ ಜೈಸಿ ಬಂದ ಕೇವಲ 17 ವರ್ಷ ಪ್ರಾಯ ಇರುವ juliane koepcke ಎಂಬ ಹುಡುಗಿಯ ಅತಿಸಾಹಸ ಕಥೆಯನ್ನಾಗಿದೆ ಇಂದು ಇಲ್ಲಿ ತಿಲಿಸಲಿರುವುದು.ಬಹಳ ಆಸಕ್ತಿಕರವಾಗಿದೆ . ಪೂರ್ತಿಯಾಗಿ ಓದಿ. ‌1971 ಡಿಸೆಂಬರ್ 24 ರಂದು ತನ್ನ ಹೈಸ್ಕೂಲ್ ವಿದ್ಯಬ್ಯಾಸ ಮುಗಿಸಿ ತನ್ನ ತಾಯಿಯ ಜೊತೆ ಪೆರುವಿನ ಲಿಮ ಎಂಬ ಸ್ಥಳದಿಂದ ತನ್ನ ತಂದೆಯ ಬಳಿ ಯಾತ್ರೆ ಮಾಡುವುದಾಗಿತ್ತು juliane koepcke ಎಂಬ 17 ವರ್ಷ ಪ್ರಾಯದ ಹೆಣ್ಣು. ಅವರು ಆರಿಸಿದ ಏರ್ಲೈನ್ಸ್ ಅಂದರೆ ವಿಮಾನಕ್ಕೆ ಹಲವಾರು ಅಪಗಾತಗಳಾಗಿತ್ತು.ಆದರಿಂದಲೆ ಅವಳ ತಂಡ ತಾಯಿಯಲ್ಲಿ ಮುನ್ನೆಚ್ಚರಿಕೆ ನೀಡಿದ್ದರು.ಯಾವುದೇ ಕಾರಣಕ್ಕೂ ಆ ವಿಮಾನದಲ್ಲಿ ticket ತೆಗೆದುಕೊಳ್ಳಬೇಡಿ ಎಂದು.ಆದರೆ ಆ ಹೊತ್ತಿಗೆ ಆಗಲೇ ಟಿಕೆಟ್ ತೇಕೊಂಡಗಿತ್ತು. ‌ ಅವರುಹೇಳಿದ ಸಮಯಕ್ಕಿಂತ ಬಹಳಷ್ಟು ಲೇಟ್ ಆಗಿತ್ತು ವಿಮಾನ ಟೇಕಾಫ್ ಆಗುವಾಗ.ಅದಕ್ಕಿರುವ ಮುಖ್ಯ ಕಾರಣ ಆ ಸಮಯದ ಕಾಲವಸ್ಥೆಯಾಗಿತ್ತು.ಅಂದು ಜೋರಾದ ಮಳೆ ಜೊತೆಗೆ ಸಿಡಿಲು ಮಿಂಚು ಕೂಡ ಇತ್ತು.ಹೇಗೋ ವಿಮಾನ ಹಾರಾಡಲು ಪ್ರಾರಂಭಿಸುತ್ತದೆ.ಅಲ್ಪ ಸಮಯದ ಬಳಿಕ ವಿಮಾನ ಅಲುಗಾಡುತ್ತದೆ.ಶೆಲ್ಫ್...

PYRAMID EXPLAINED|| ಮಂಗಳ ಗ್ರಹದಲ್ಲಿ ಏಲಿಯೆನ್ಸ್‌ನ ಸ್ವಂತ ಪಿರಮಿಡ್‌ಗಳು

 ನೂರಾರು ವರ್ಷಗಳ ಕಾಲ ಮಾತ್ರ ಮಾಡಿದರೆ ಪೂರ್ತಿಯಾಗುವ ಆ ಕಟ್ಟಡವನ್ನು ಅವರು ನಿರ್ಮಿಸಿದ್ದು ಕೇವಲ 15 ವರ್ಷಗಳಲ್ಲಿ ಆಗಿತ್ತು. ಹೆಗೆಯಾಗಿರಬಹುದು ಅವರು ಅದನ್ನು ನಿರ್ಮಿಸಿದ್ದು?.ಯಾಕಾಗಿರಬಹುದು ಅವರು ಅದನ್ನು ನಿರ್ಮಿಸಿದ್ದು?.ಭೂಮಿ ಬಿಟ್ಟು ಹೊರಗಿನ ಯಾರದಾದರೂ ಸಹಾಯ ಅವರಿಗೆ ಲಭಿಸಿರಬಹುದೇ?. ಅದೇ ನಾನು ಇಂದು ನಿಮಗೆ ತಿಲಿಸಲಿರುವುದು ಪಿರಮಿಡ್ ಗಳ ನಿಗೂಡತೆ ಬಗ್ಗೆ‼️..... ಯಾವಾಗಲೂ ಒಂದು ಅದ್ಭುತವಾಗಿದೆ ಈ ಪಿರಮಿಡ್ ಅನ್ನುವುದು.3 ರಿಂದ 5 ಟನ್ ಭಾರ ಇರುವ 25ಲಕ್ಷ ಕಲ್ಲುಗಳನ್ನು ಉಪಯೋಗಿಸಿ ಪಿರಮಿಡ್ ಗಾಳನ್ನು ನಿರ್ಮಿಸಲಾಗಿದೆ.ಆ ಕಾಲದ ತಂತ್ರಜ್ಞಾನ ಮತ್ತು ಅಂದಿನ ಜನಸಂಖ್ಯೆ ನೋಡುವ ಸಂದರ್ಭದಲ್ಲಿ ಕಡಿಮೆ ಅಂದರೆ 625ವರ್ಷ ಹಿಡಿಸುತ್ತದೆ ಒಂದು ಪಿರಮಿಡ್ ನಿರ್ಮಿಸಲು.ಆದರೆ ಈಜಿಪ್ಟ್ ನ ಜನ ಪಿರಮಿಡ್ ಅನ್ನು ನಿರ್ಮಿಸಿದ್ದು ಕೇವಲ 15 ವರ್ಷಗಳಲ್ಲಿ ಆಗಿತ್ತು.5000 ವರ್ಷಗಳ ಹಿಂದಿನಿಂದ ಆಗಿರುತ್ತದೆ ಪಿರಮಿಡ್ ಗಳ ಕಥೆ ಪ್ರಾರಂಭ.ನಾವು 6000 ವರ್ಷಗಳ ಹಿಂದಿನಿಂದಲೇ ಪ್ರಾರಂಭ ಮಾಡೋಣ.ಆ ಒಂದು ಸಮಯದಲ್ಲಿ ಮನುಷ್ಯರು ಗುಂಪಾಗಿ ಬದುಕಲು ಪ್ರಾರಂಭಿಸಿದ ಕಾಲ ಆಗಿರುವುದರಿಂದ ಅವರ ಎಡೆಯಲ್ಲಿ ವಿಶ್ವಾಸ, ಮತ, ದೇವರು, ಏನು ಇರಲಿಲ್ಲ. ಅವರಲ್ಲಿ ಇದ್ದದ್ದು ಬೇರೆ ಬೇರೆ ರೀತಿಯ ರೋಗಗಳು ಆಗಿತ್ತು. ತುಂಬಾ ರೋಗ ಇತ್ತು ಎನ್ನುವ ಕಾರಣದಿಂದಲೇ ಆ ಕಾಲದಲ್ಲಿ ಬದುಕಿದ್ದ ಜನರ ಸರಾಸರಿ ಆಯಸ್ಸು ಅನ್ನುವುದು 40 ವರ್ಷ ಮಾತ್ರವಾಗಿತ್ತು. ಈ ಒಂದು ಪ್ರಾಯ ಆ...

4 - Zero investment business ideas

  Small business ideas for biginners in lockdown ನೀವು ಈ ನಾಣ್ಣುಡಿಯನ್ನು ಕೇಳಿರಬಹುದು." ಮನುಷ್ಯ ಹೇಳ್ತಾನೆ ಹಣ ಬಂದ್ರೆ ನಾನು ಏನಾದ್ರೂ ಮಾಡಬಹುದು ,ಹಣ ಹೇಳ್ತದೆ ನೀನು ಏನಾದ್ರೂ ಮಾಡು  ನಾನು ಬರುತ್ತೇನೆ"ಆದರೆ ಹಣ ಸಂಪಾದಿಸಲು ಸ್ವಲ್ಪ ಹಣ ಬೇಕು. ಆಗಾಗ್ಗೆ ಬಂಡವಾಳ ಇಲ್ಲದ ಕಾರಣ ಅನೇಕ ವ್ಯವಹಾರ ವಿಚಾರಗಳನ್ನು ಕೈಬಿಡಲಾಗುತ್ತದೆ.ಆದರೆ ಒಂದು ಉತ್ತಮ businessman ಯಾವತ್ತೂ ತನ್ನ ಕನಸುಗಳನ್ನು ಒಡೆಯಲು ಬಿಡುವುದಿಲ್ಲ.ಮತ್ತು business ಬಗ್ಗೆ ಮಾತನಾಡುವಾಗ ಈಗಿನ ಯುವ ಪರಂಪರೆ ಯೋಚನೆ ಮಾಡುವುದೆಂದರೆ zero investment ನಿಂದ ಪ್ರಾರಂಭಿಸುವ business ಯಾವುದಾದರೂ ಇದೆಯಾ? ಎಂದು. ಇದರ ಉತ್ತರ ಹೌದು. ನೀವು ಸ್ವಲ್ಪ research ಮಾಡಿದರೆ ಮನೆಯಲ್ಲೇ ಕೂತು zero investment ನಿಂದ ಪ್ರಾರಂಭಿಸಿ ಹಣ ಸಂಪಾದಿಸಬಹುದಾದ ಅನೇಕ ದಾರಿಗಳಿವೆ.ಇಂದು ನಾವು ಆ ಥರದ ಕೆಲವು ಬ್ಯುಸಿನೆಸ್ ಬಗ್ಗೆ ತಿಳಿಯೋಣ. ಅದಕ್ಕಿಂತ ಮೊದಲು ಎಲ್ಲಾ ಫೀಲ್ಡ್ ನಲ್ಲು ಉಪಯೋಗವಾಗುವ ಕೆಲವು ಬ್ಯುಸಿನೆಸ್ basic rouls ಬಗ್ಗೆ ತಿಳಿಯೋಣ. Basic Business Rouls 1.time is money ಹೌದು ನಮಿಗೆ ಎಲ್ಲರಿಗೂ ತಿಳಿದ ಹಾಗೆ ಸಮಯವನ್ನು ಹಣ ಕೊಟ್ಟು ಖರೀದಿಸಲು ಆಗುವುದಿಲ್ಲ.ಈಗಿನ ಕಾಲದಲ್ಲಿ ಯಾರಲ್ಲಾದರೂ ಸ್ವಲ್ಪ ಸಮಯ ಇದ್ಯಾ ಎಂದು ಕೇಳಿದರೆ ಅವರು ಹೇಳುವುದು ನಾನು ಇವತ್ತು ತುಂಬಾ buzy , ನನ್ನ ಹತ್ತಿರ ಸಮಯವಿಲ್ಲ ಎಂದು. ನಮಿಗೆ ಗೊತ್ತು ನಮ್...