Devil's Bible
ಅದು ಬೈಬಲ್ ಆಗಿರಬಹುದು ಎಂದುಕೊಂಡು ಅವರು ಆ ದೊಡ್ಡ ಪುಸ್ತಕದ ಪೇಜ್ಅನ್ನು ಬಿಡಿಸುತ್ತಾರೆ.ಹಾಗೆ ಮುಂದುವರಿಯುತ್ತಾ ಹೋದಂತೆ ಕೆಟ್ಟ ವಾಕ್ಯಗಳು ಅವರಿಗೆ ಕಾಣಸಿಗುತ್ತದೆ. ಹಾಗೇ ಕೊನೆಯಲ್ಲಿ ಅವರಿಗೆ ಶೈತಾನ ನನ್ನು ಕಾಣಲು ಸಾಧ್ಯವಾಯಿತು.ಹೌದು ಅದು ಶೈಥಾನ ನ ಬೈಬಲ್ ಆಗಿತ್ತು. ಆ ಭಯಂಕರವಾದ ಶೈತಾನನ ಬೈಬಲ್ ಬಗ್ಗೆ ಇನ್ನೂ ಅನೇಕ ವಿಚಾರಗಳನ್ನು ತಿಳಿಯೋಣ. ಇದನ್ನು ಪೂರ್ತಿಯಾಗಿ ಓದಿ. ಬಹಳ ರೋಚಕವಾಗಿದೆ. ಚೆಕ್ ರಿಪಬ್ಲಿಕ್ ನ ಬೋಹಮಿಯ ಎಂಬ ಸ್ಥಳದಲ್ಲಿ ಬರೆದಂತಹ ಮಧ್ಯ ಕಾಲದ ಒಂದು ಅದ್ಬುತ ಎಂದು ಕರೆಯಲ್ಪಡುವ ಪುಸ್ತಕವಾಗಿದೆ Codex Gigas ಎಂಬುವ ಡೆವಿಲ್ಸ್ ಬೈಬಲ್.
Codex Gigas ಎಂಬ ಶೈತಾನನ್ ಬೈಬಲ್ ನ ಕುರಿತು ಜಗತ್ತು ಅರಿಯುವುದು 1648 ರಲ್ಲಿ ಆಗಿದೆ. ಯುರೋಪಿನಲ್ಲಿ ಅತೀ ಹೆಚ್ಚು ಕಾಲ ಅಂದರೆ 30 ವರ್ಷಗಳ ಕಾಲ ನಡೆದ ಯುದ್ಧ ನಿಂತ ವರ್ಷವಾಗಿದೆ ಅದು. ಯುದ್ಧದಲ್ಲಿ ವಿಜಯಿಯಾದ ಸ್ವೀಡಿಶ್ ಸೈನಿಕರು ತಮ್ಮ ಕೆಳಗಿದ್ದ ಸ್ಥಳಗಳನ್ನು ಎಲ್ಲ ದೋಚಲು ಪ್ರಾರಂಬಿಸಿದರು.ಆವಾಗ ಕೆಳಗಿನ ಕೊಠಡಿಯಿಂದ ಯಾರನ್ನೂ ಆಶ್ಚರ್ಯಪಡಿಸುವ ಆ ದೊಡ್ಡ ಪುಸ್ತಕ ಅವರಿಗೆ ಕಾಣುವುದು.ಬಹಳ ಕಷ್ಟಪ್ಪಟ್ಟಾಗಿತ್ತು ಆ ಪುಸ್ತಕವನ್ನು ಮೇಲಕ್ಕೆ ಎತ್ತಿದ್ದು.75 ಕೆ.ಜಿ. ತೂಕವಿರುವ ಆ ಪುಸ್ತಕದ ಉದ್ದ 100cm, ಅಗಲ 60cm ಹಾಗೂ ಎತ್ತರ 20cm ಇತ್ತು.ಅವರು ಆ ಪುಸ್ತಕವನ್ನು ನೋಡಿ ಆಶ್ಚರ್ಯದಿಂದ ಅದರ ಪುಟಗಳನ್ನು ಬಿಡಿಸಲು ಆರಂಭಿಸಿದರು.13 ನೇ ಶತಮಾನದಲ್ಲಿ ಉಪಯೋಗಿಸುತ್ತಿದ್ದ ಲ್ಯಾಟಿನ್ ಭಾಷೆಯಲ್ಲಿ ಬರೆದಿತ್ತು. ಒಂದೇ ನೋಟದಲ್ಲಿ ಅದು ಬೈಬಲ್ ಆಗಿರಬಹುದು ಎಂದು ಅವರು ತಿಳಿದುಕೊಂಡರು.ಆದರೆ ಅದರ ಪುಟಗಳನ್ನು ಅವರು ತಿರುಗಿಸಿದಂತೆ ಅವರಿಗೆ ಆಶ್ಚರ್ಯಕರ ವಿಷಯಗಳು ಕಾಣಿಸತೊಡಗಿದವು.
ಪ್ರೇತಭಾದೆಯನ್ನು ಯಾವರೀತಿ ನಿಲ್ಲಿಸಬಹುದು,ಅದಕ್ಕಾಗಿ ಯಾವ ಮಂತ್ರವನ್ನು ಉಪಯೋಗಿಸುತ್ತೇವೆ ಎಂಬ ಅನೇಕ ವಿಷಯಗಳ ಕುರಿತು ಆ ಪುಸ್ತಕದಲ್ಲಿ ಬರೆದಿತ್ತು.ಕೊನೆಗೆ 290 ನೆಯ ಪುಟದಲ್ಲಿ ಅವರಿಗೆ ನೋಡಲು ಸಾಧ್ಯವಾದದ್ದು ಶೈತಾನನ ರೂಪವನ್ನಾಗಿತ್ತು.
ಮತ್ತೂ ಆಶ್ಚರ್ಯಚಕಿತರಾದ ಅವರು ಅದರ ಪುಟಗಳನ್ನು ಬಿಡಿಸಲಾರಂಭಿಸಿದರು. ಆದರೆ ಅದರ ಕೊನೆಯ 10 ಪುಟಗಳನ್ನು ಅವರಿಗಿಂತ ಮುಂಚೆ ಯಾರೋ ಕದ್ದಿದ್ದರು. ಅವರು ಆ 10 ಪುಟಗಳನ್ನು ಇಡೀ ಕೊಠಡಿಯಲ್ಲಿ ಹುಡುಕಿದರೂ ಅವರಿಗೆ ಆ ಪುಟಗಳನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ.
ಆ ಪುಸ್ತಕದ ಬಗ್ಗೆ ಅದರಲ್ಲಿರುವ ಆಶ್ಚರ್ಯ ದ ಬಗ್ಗೆ ಅಲ್ಲಿನ ಆಡಳಿತಾಧಿಕಾರಿಗಳು ತಿಳಿದಾಗ ಅದರಬಗ್ಗೆ ಇನ್ನೂ ಅನೇಕ ವಿಷಯಗಳನ್ನು ತಿಳಿಯಲು ಒಂದು ಗುಂಪನ್ನು ನೇಮಿಸಿದರು. ಅವರು ಅದರಲ್ಲಿ ಇನ್ನೂ ಆಚರ್ಯಗೊಳಿಸುವ ವಿಷಯವನ್ನು ತಿಳಿಸಿದರು. ಆ ಪುಸ್ತಕದ ಪ್ರಥಮ ಪುಟದಿಂದ ಹಾಗೂ ಕೊನೆಯ ಪುಟದ ವರೆಗಿನ ಅಕ್ಷರಗಳು ಒಂದೇ ರೀತಿ ಇತ್ತು ಅದರಲ್ಲಿ ಯಾವುದೇ ರೀತಿಯ ಬದಲಾವಣೆ ರಿಸರ್ಚರ್ಸ್ ಗಳಿಗೆ ಕಾಣಸಿಗಲಿಲ್ಲ.ಅದರಲ್ಲಿ ತಿಳಿಯಬಂದದ್ದು ಈ ಪುಸ್ತಕವನ್ನು ಒಂದೇ ವ್ಯಕ್ತಿ ಬರೆದಿದ್ದಾನೆ ಎಂದು.ಆದರೆ 75 ಕೆ.ಜಿ ಇರುವ ಈ ಪುಸ್ತಕವನ್ನು 70 ಕತ್ತೆಗಳನ್ನು ಕೊಂದು ಅದರ ಚರ್ಮದಿಂದ ಇದನ್ನು ರಚಿಸಲಾಗಿದೆ ಅಲ್ಲದೆ ಅದರಲ್ಲಿ ಹೈಲೈಟ್ಸ್ ಪದಗಳಿಗೆ ಬೇರೆ ಬೇರೆ ಬಣ್ಣಗಳನ್ನು ಹಚ್ಚಿ ಬೇರೆ ಬೇರೆ ಚಿತ್ರಗಳನ್ನು ಬಿಡಿಸಿ ಆ ಪುಷ್ಟಕ ರಚಿಸಿದ್ದಾರೆ. ಈ ರೀತಿ ಅಲ್ಲದೆ ಯಾವುದೇ ರೀತಿಯ ಚಿತ್ರ ಬಿಡಿಸದೆ, ಯಾವುದೇ ಅಲಂಕಾರ ಮಾಡದೆ, ಊಟ ನಿದ್ದೆ ಏನು ಇಲ್ಲದೆ ಒಬ್ಬ ವ್ಯಕ್ತಿ ಈ ಪುಸ್ತಕವನ್ನು ಬರೆಯುವುದಾಗಿ ಬಂದರೆ ಅವನಿಗೆ 5 ವರ್ಷಗಳ ಸಮಯ ಬೇಕು. ಒಬ್ಬ ಸಾಧಾರಣ ಮನುಷ್ಯನ ಬಗ್ಗೆ ಹೇಳಬೇಕಾದರೆ ಎಲ್ಲ ಅಲಂಕಾರಗಳನ್ನು ಮಾಡಿ ಈ ರೀತಿ ಚಿತ್ರ ಮಾಡಿ ಈ ಪುಸ್ತಕವನ್ನು ರಚಿಸಬೇಕಾದರೆ ಅವನಿಗೆ ಹಿಡಿಯುವ ಸಮಯ ಬರೋಬರಿ 30 ವರ್ಷಗಳು. ಹಾಗೇ 30 ವರ್ಷ ಬರೆಯುದಾದರೆ ಮೊದಲ ಪುಟದಿಂದ ಪ್ರಾರಂಭಿಸಿ 30 ನೆಯ ವರ್ಷ ಕೊನೆಯ ಪುಟ ಬರೆಯಬೇಕಾದರೆ ತನ್ನ ಅಕ್ಷರದಲ್ಲಿ ಸ್ವಲ್ಪವಾದರೂ ಬದಲಾವಣೆ ಉಂಟಾಗುತ್ತದೆ.ಆದರೆ Codex Gigas ಎಂಬ ಈ ಪುಸ್ತಕದಲ್ಲಿ ಆ ರೀತಿಯ ಯಾವುದೇ ಬದಲಾವಣೆ ಸಂಶೋಧಕರಿಗೆ ಕಾಣಸಿಗಲಿಲ್ಲ.
ಇದರಿಂದ ಸಂಶೋಧಕರು ಹೇಳುವುದು ಏನೆಂದರೆ ಮನುಷ್ಯರಿಗೆ ಚಿಂತಿಸಲೂ ಆಗದಷ್ಟು ವೇಗದಲ್ಲಿ ಯಾವುದೋ ವ್ಯಕ್ತಿ ಈ ಪುಸ್ತಕವನ್ನು ಬರೆದಿದ್ದಾನೆ ಎಂದು.ಆದರೆ ಯಾವ ಕಾರಣದಿಂದ ಈ ಪುಸ್ತಕವನ್ನು ರಚಿಸಿದ್ದಾನೆ?. ಮೊದಲ ಪುಟದಲ್ಲಿ ಒಳ್ಳೆಯ ವಿಷಯಗಳು ಇದ್ದಂತಹ ಈ ಪುಸ್ತಕದ ಕೊನೆಯ ಪುಟದಲ್ಲಿ ದೆವ್ವದ ಚಿತ್ರ ಬಂದದ್ದು.ಇದಕ್ಕಿರುವ ಕಾರಣವಾದರೂ ಏನೂ .ಎಂಬ ಅನೇಕ ಪ್ರಶ್ನೆಗಳು ಬರುತ್ತದೆ.ಇದರ ಬಗ್ಗೆ ತಿಳಿಯಬೇಕಾದರೆ ಇನ್ನೂ ಅನೇಕ ವರ್ಷಗಳು ಹಿಂದೆ ಹೋಗಬೇಕು.
Story About Codex Gigas(Devil's-Bible)
ವರ್ಷ 1300 . ಅಂದು ಆ ದೇಶದ ನೀತಿಯ ವಿರುದ್ಧವಾಗಿ ನಡೆದಿದ್ದಕ್ಕೆ ಒಂದು ಕ್ರೈಸ್ತ ಪುರೋಹಿತನಿಗೆ ಅಲ್ಲಿನ ಆಡಳಿತ ಅಧಿಕಾರಿಗಳು ನೀಡಿದ ಶಿಕ್ಷೆ ಜೀವ ಸಹಿತವಾಗಿ ಒಂದು ಗೋಡೆಯೊಳಗೆ ಹಾಕಿ ಮುಚ್ಚುವುದು ಎಂದಾಗಿತ್ತು. ಶಿಕ್ಷೆ ನೀಡುವವರು ಅವನನ್ನು ಒಂದು ಕೊಠಡಿಗೆ ಹಾಕಿ ಮುಚ್ಚುವಾಗ ಅವನು ಜೋರಾಗಿ ಕೂಗಿ ಹೇಳುತ್ತಾನೆ." ನಾನು ಒಬ್ಬ ಪುರೋಹಿತ , ನನಿಗೆ ಅನೇಕ ಜ್ಞಾನ ಇದೆ. ನೀವು ನನಿಗೆ ಒಂದು ದಿವಸದ ಸಮಯ ನೀಡಿದರೆ ಅಂದರೆ ನನ್ನ ಶಿಕ್ಷೆಯನ್ನು ಒಂದು ದಿವಸ ಮುಂದೂಡಿದರೆ ನಾನು ಇದುವರೆಗೂ ಯಾರೂ ರಚಿಸಿದ ಎಲ್ಲೂ ಕಂಡು ಕೇಳರಿಯದ ಒಂದು ಅದ್ಭುತವಾದ ಪುಸ್ತಕವನ್ನು ರಚಿಸಿ ಕೊಡುವೆನು" ಎಂದು. ಹಾಗೆ ಅಷ್ಟೊಂದು ವಿಶೇಷವಾದ ಪುಸ್ತಕವನ್ನು ಒಂದು ವ್ಯಕ್ತಿಗೆ ಒಂದೇ ದಿನದಲ್ಲಿ ಬರೆಯಲು ಆಗುವುದಿಲ್ಲ ಎಂದು ತಿಳಿದ ಅಧಿಕಾರಿಗಳು ಅವನಿಗೆ ಒಂದು ದಿನದ ಸಮಯವನ್ನು ನೀಡುತ್ತಾರೆ. ಅಲ್ಲದೆ ನೀನು ಆ ರೀತಿ ಅದ್ಭುತವಾದ ಆಶ್ಚರ್ಯ ಗೊಳಿಸುವ ಒಂದು ಪುಸ್ತಕವನ್ನು ಬರೆಯುವುದೇ ಆಗಿದ್ದಲ್ಲಿ ನಿನ್ನ ಶಿಕ್ಷೆಯನ್ನು ಕಡಿತಗೊಳಿಸಲಾಗುವುದು. ಎಂದೂ ಹೇಳುತ್ತಾರೆ.
ಮರುದಿವಸ ಆ ಪುರೋಹಿತ ತನಗೆ ತಿಳಿದಿರುವ ತಾನು ತನ್ನ ಜೀವಿತ ಅವಧಿಯಲ್ಲಿ ಕಲಿತಂತಹ ಎಲ್ಲ ಜ್ಞಾನವನ್ನು ಬರೆಯಲು ಪ್ರಾರಂಭ ಮಾಡುತ್ತಾನೆ.ಆದರೆ ಹೆಚ್ಚಿನ ವಿಷಯಗಳನ್ನು ಅವನಿಗೆ ಬರೆಯಲು ಸಾಧ್ಯವಾಗಲಿಲ್ಲ.ಈಗ ತಾನು ಏನು ಮಾಡಬೇಕೆಂದು ತಿಳಿಯದೆ ಹುಚ್ಚನಂತೆ ಕಾರಾಗೃಹದಲ್ಲಿ ಆಚೆಗೆ ಈಚೆಗೆ ನಡೆಯುತ್ತಾನೆ. ಆಗ ಅವನು ಅಂದುಕೊಳ್ಳುತ್ತಾನೆ ಯಾಕಾಗಿ ದೇವರಲ್ಲಿ ಪ್ರಾರ್ತಿಸಬಾರದು ಎಂದು. ಹಾಗಾಗಿ ಅವನು ದೇವರಲ್ಲಿ ಪ್ರಾರ್ಥನೆಯನ್ನು ಮಾಡುತ್ತಾನೆ.ಆದರೆ ಆತನಿಗೆ ಯಾವುದೇ ರೀತಿಯ ಉತ್ತರವೂ ದೇವರಿಂದ ಬರುವುದಿಲ್ಲ.ಇದರಿಂದ ನಿರಶಿತನಾದ ಅವನು ಅಂದುಕೊಳ್ಳುತ್ತಾನೆ.ಯಾಕಾಗಿ ನಾನು ದೆವ್ವದ ಸಹಾಯ ಕೇಳಬಾರದು ಎಂದು. ಹಾಗೆ ಅವನು ಕಣ್ಣನು ಮುಚ್ಚಿ ದೇವ್ವದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾನೆ. ಅವನು ಕಣ್ಣು ತೆರೆದಾಗ ಅಲ್ಲಿ ಸಾಕ್ಷಾತ್ ದೆವ್ವ ಎದುರುಗಡೆ ನಿಂತಿತ್ತು. ಪುರೋಹಿತ ತನ್ನ ಕಷ್ಟವನ್ನು ತಿಳಿಸಿದಾಗ ತನಿಗೆ ಇಷ್ಟವಿರುವ ಸಮಯದಲ್ಲಿ ಪುರೋಹಿತನ ಪ್ರಾಣ ತೆಗೆಯುತ್ತೇನೆ ಎಂಬ ನಿಭಂಡನೆಯೊಂದಿಗೆ ಆ ದೇವ್ವವು ಆತನಿಗೆ ಸಹಾಯ ಮಾಡಲು ಒಪ್ಪಿಕೊಳ್ಳುತ್ತದೆ. ಆ ದೆವ್ವ ಇರುವುದರಿಂದ ಮಾತ್ರ ಮನುಷ್ಯ ಇಲ್ಲಿಯವರೆಗೂ ಕಾಣದ ಒಂದು ಪುಸ್ತಕವನ್ನು ಬರೆಯಲು ಆ ಪುರೋಹಿತನಿಗೆ ಸಾಧ್ಯವಾಯಿತು. ಅದರ ಕಾರಣದಿಂದ ಆತನನ್ನು ಬಿಡುಗಡೆ ಮಾಡಲಾಯಿತು. ತನ್ನ ಕಷ್ಟಕ್ಕೆ ಸಹಾಯ ಮಾಡಿದ ಕಾರಣ ಧನ್ಯವಾದ ಹೇಳುವ ಸಲುವಾಗಿ ಆ ಪುರೋಹಿತ ಅದರ 290 ನೆಯ ಪುಟದಲ್ಲಿ ಆ ದೆವ್ವದ ರೂಪವನ್ನು ಬರೆಯುತ್ತಾನೆ. ಬಾಕಿ ಕೊನೆಯ ಹತ್ತು ಪುಟಗಳಲ್ಲಿ ಯಾವರೀತಿ ದೆವ್ವದಲ್ಲಿ ಸಹಾಯವನ್ನು ಕೇಳಬೇಕು ಎಂಬೆಲ್ಲಾ ವಿಷಯದ ಕುರಿತು ಬರೆಯಲಾಗಿತ್ತು.
Conclusion
Codex Gigas ಎಂಬ ಪುಸ್ತಕದ ಬಗ್ಗೆ ಪ್ರಚಾರದಲ್ಲಿ ಇರುವ ಒಂದು ಕಥೆಯಾಗಿದೆ ಇದೆ.ಆದರೆ ಸಂಶೋಧಕರು ಹೇಳುವ ಮಾತನ್ನು ನೋಡಿದರೆ ಎಲ್ಲೋ ಸ್ವಲ್ಪ ಸತ್ಯ ಇದರಲ್ಲಿ ಇದೆ ಎಂದು ನಮಿಗೂ ಅನ್ನಿಸಬಹುದು. ನಿಮಗೆ ಈ ವಿಷಯ ತುಂಬಾ ರೋಚಕವಾಗಿ ಇತ್ತು ಎಂದು ಅಂದುಕೊಳ್ಳುತ್ತೇನೆ. ನಿಮ್ಮ ಅಭಿಪ್ರಾಯ ಕೆಳಗೆ ಕಾಮೆಂಟ್ ಬಾಕ್ಸ್ನಲ್ಲಿ ಬರೆಯಿರಿ.
ಧನ್ಯವಾದಗಳು.
Comments
Post a Comment