Skip to main content

ಭಾರತದ ಭೂತ ಕೋಟೆಯ ಆಘಾತಕಾರಿ ಕಥೆ||Story Of Bhangarh fort.

 6 ಗಂಟೆಯ ನಂತರ ಅಲ್ಲಿಗೆ ಯಾರೂ ಹೋಗಬಾರದು ಎಂದು ಹೇಳಿದರೂ ಅದನ್ನು ಲೆಕ್ಕಿಸದೆ ಅಲ್ಲಿಗೆ ಹೋದವರೆಲ್ಲಾ ಅರ್ಧ ಜೀವದಲ್ಲಾಗಿತ್ತು ಅವರು ಅಲ್ಲಿಂದ ಬಂದದ್ದು. ಸಾವಿನ ಕಾರಣ ತಿಳಿಯದ ಹಲವು ಶವ ಶರೀರಗಳು ಅಲ್ಲಿನ ಕೋಟೆಯಿಂದ ಕಂಡು ಹಿಡಿದಿದ್ದಾರೆ. ನಾನು ಇಂದು ನಿಮಗೆ ತಿಳಿಸಲು ಇಷ್ಟಪಡುವುದು ಭಾರತದಲ್ಲೇ ಭಯಾನಕ ಸ್ಥಳಗಳಲ್ಲಿ ಅತೀ ಭಯಾನಕವಾದ ಭಾಂಗರ್ ಕೋಟೆಯ ಬಗ್ಗೆಯಾಗಿದೆ.

Bhangarh Fort

ರಾಜಸ್ಥಾನದಲ್ಲಿರುವ ಜೈಪುರ್ ಎಂಬ ಸ್ಥಳದಿಂದ 85 k.m ದೂರದಲ್ಲಿ ಹೋದರೆ ಪ್ರೇತಗಳ ಸ್ಥಳವಾದ ಭಾಂಗಾರ್ ಕೋಟೆಗೆ ತಲುಪಬಹುದು.ಹಾಗೆ ಹೋಗುತ್ತಿರಬೇಕಾದರೆ ದಾರಿಯಲ್ಲಿ ಅನೇಕ ಜನರು ಅಲ್ಲಿನ ಅಮನಿಷಿಕ ವಿಷಯದ ಬಗ್ಗೆ ತಿಳಿಸಿ ಕೊಡುತ್ತಾರೆ. ಕೋಟೆಯ ಹತ್ತಿರವಿರುವ ಗ್ರಾಮಕ್ಕೆ ಹೋಗಬೇಕಾದರೆ 10k.m ಯಾತ್ರೆ ಮಾಡಬೇಕು.ಆ ಕೋಟೆಯ ಸುತ್ತಲೂ ನಿರ್ಜನವಾಗಿರುತ್ತದೆ. ಆ ಕೋಟೆ ಕಾಣುವ ಸ್ಥಳದಲ್ಲಿ ಯಾರೂ ಮನೆಯನ್ನು ನಿರ್ಮಿಸುದಿಲ್ಲ ಹಾಗೆ ನಿರ್ಮಿಸಿದರೆ ಆ ಮನೆಯ ಮೇಲ್ಛಾವಣಿ ಬೀಳುತ್ತದೆ ಎಂದು ಆ ಜನರ ನಂಬಿಕೆ. ಅದೇರೀತಿ ರಾತ್ರಿ ವೇಳೆ ಆ ಕೋಟೆಯನ್ನು ತಲೆ ಎತ್ತಿ ನೋಡಲು ಕೂಡ ಅಲ್ಲಿನ ಗ್ರಾಮೀಣ ಜನರು ಭಯಪಡುತ್ತಾರೆ.17 ನೆಯ ಶತಮಾನದಲ್ಲಿ ನಿರ್ಮಿಸಿದ ಬಹಳ ಸುಂದರ ನಿರ್ಮಾಣವಾದ ಭಂಗರ್ ಕೋಟೆ ಹೇಗೆ ಪ್ರೇತಗಳ ಕೊತೆಯಾಗಿ ಮಾರ್ಪಟ್ಟಿದ್ದು? 👇👇

Story About Bhangarh Fort

ಗ್ರಾಮೀಣರು ಇದರ ಬಗ್ಗೆ ಎರಡು ಕಥೆಗಳನ್ನು ಹೇಳುತ್ತಾರೆ. ಮೊದಲನೆಯದು ಹೀಗಿದೆ.

ತುಂಬಾ ವರ್ಷಗಳ ಹಿಂದೆ ಈ ಕೋಟೆಯಲ್ಲಿ ಬಹಳ ಸುಂದರವಾಗಿ ಇರುವ ರತ್ನಾವತಿ ಎಂಬ ರಾಜಕುಮಾರಿ ಜೀವಿಸುತ್ತಿದ್ದಳು.ಎಷ್ಟೊಂದು ಸುಂದರಿ ಎಂದರೆ ಅವಳ ಸೌಂದರ್ಯ ತನ್ನ ರೇಖೆಯನ್ನು ದಾಟಿತ್ತು. ಅದರಿಂದಲೇ ರಾಜಸ್ಥಾನದ ಅನೇಕ ರಾಜರು ಅವಳನ್ನು  ಮದುವೆಯಾಗಲೆಂದು ಅಲ್ಲಿಗೆ ಬರುತ್ತಿದ್ದರು. ಅವರ ಎಡೆಯಲ್ಲಿ ಸಿರಿಯಾ ಎಂಬ ಓರ್ವ ಮಂತ್ರವಾದಿ ಕೂಡ ಇದ್ದನು.ಅವನು ರಾಜಕುಮಾರಿಯ ಮೇಲೆ ಅತೀವ ಮೋಗಿತನಾಗಿ ರತ್ನಾವತಿಯನ್ನು ಪಡೆಯಲೇಬೇಕು ಎಂದು ತನ್ನ ಮಂತ್ರದ ಮಾರ್ಗವನ್ನು ಹಿಡಿಯುತ್ತಾನೆ.

              ಒಂದು ದಿವಸ ರಾಜಕುಮಾರಿಗೆ ತೆಗೆದುಕೊಂಡು ಹೋಗುತ್ತಿದ್ದ ಎಣ್ಣೆಗೆ ಆತನು ಮಂತ್ರ ಪ್ರಯೋಗಗಳನ್ನು ಮಾಡುತ್ತಾನೆ.ಆದರೆ ಆ ಎಣ್ಣೆಯನ್ನು ಮೂಸಿನೋಡಿ ಇದರಲ್ಲಿ ಏನೋ ಇದೆ ಎಂದು ತಿಳಿ ರಾಜಕುಮಾರಿ ಆ ಎಣ್ಣೆಯನ್ನು ಕೊಂಡುಹೋಗಿ ಒಂದು ಬಂಡೆ ಕಲ್ಲಿನ ಮೇಲೆ ಸುರಿಯುತ್ತಾಳೆ.ಆಗ ಆ ಬಂಡೆಕಲ್ಲು ಉರುಳಿ ಹೋಗಿ ಆ ಮಂತ್ರವಾದಿಯ ಮೇಲ್ ಬೀಳುತ್ತದೆ. ಆಗ ಆ ಮಂತ್ರವಾದಿ ಅಲ್ಲಿ ಸಾವನ್ನಪ್ಪುತ್ತಾನೆ.ಆತನು ಸಾಯುವ ಮುಂಚೆ ಆ ಕೋಟೆಯನ್ನು ಮತ್ತು ಅದರಲ್ಲಿ ಇರುವ ಎಲ್ಲ ಜನರನ್ನು ಶಪಿಸಿದ್ದನು.ಇಲ್ಲಿನ ಜನರು ಪುನರ್ಜನ್ಮ ಇಲ್ಲದೆ ಗತಿ ಇಲ್ಲದ ಆತ್ಮಗಳಾಗಿ  ಕೋಟೆಯಲ್ಲಿ ಯಾವಾಗಲೂ ನರಳುತ್ತಿರಲಿ. ಎಂದು ಶಾಪ ಹಾಕುತ್ತಾನೆ.  ಸಂಭವ ನಡೆದ ಬಳಿಕ 1 ವರ್ಷಗಳ ನಂತರ ರಾಜಕುಮಾರಿ ರತ್ನಾವತಿ ಒಂದು ಯುದ್ಧದಲ್ಲಿ ಮರಣವನ್ನು ಅಪ್ಪುತ್ತಾರೆ. ಮಲ್ಲ ಮೆಲ್ಲನೆ ಆ ಮಂತ್ರವಾದಿಯ ಶಾಪ ಆ ಕೋಟೆಯನ್ನು ಹಿಡಿಸಲಾರಂಬಿಸಿತು. ಅನೇಕರಿಗೆ ಅನೇಕ ರೀತಿಯ ಅಮಾನುಷಿಕ ವಿಷಯಗಳನ್ನು ಎದುರಿಸಬೇಕಾಗಿ ಬಂತು. ನಾವು ಈಗ ನೋಡುವ ರೀತಿಗೆ ಬಾಂಗರ್ ಕೋಟೆ ಬದಲಾಯಿತು.

            ಗ್ರಾಮೀಣರು ಹೇಳುವ 2 ನೆಯ ಕಥೆ ಈ ರೀತಿ ಇದೆ.ಅಲ್ಲಿ ಕೋಟೆ ನಿರ್ಮಾಣ ಮಾಡುವ ಮುಂಚೆ ಗುರು ಬಲನಾಥ್ ಎಂಬ ಓರ್ವ ಸನ್ಯಾಸಿ ಜೀವಿಸುತ್ತಿದ್ದ. ರಾಜನು ಅಲ್ಲಿ ಕೋಟೆ ನಿರ್ಮಿಸಲು ಉದ್ದೇಶಿಸಿದ ಕೂಡಲೇ ಮೊದಲು ತನ್ನ ಅಭಿಪರಾಯವನ್ನು ತಿಳಿಸಿದ್ದು ಸನ್ಯಾಸಿಯಲ್ಲಾಗಿತ್ತು. ಆಗ ಸನ್ಯಾಸಿ ಒಂದು ಷರತ್ತನ್ನು ಇಡುತ್ತಾನೆ. ಯಾವುದೇ ಕಾರಣದಿಂದಲೂ ಈ ಕೋಟೆಯ ನೆರಳು ನನ್ನ ಸಮಾಧಿಗೆ ಬೀಳಬಾರದು. ಹಾಗೆ ಬಿದ್ದರೆ ಅದು ಈ ಕೋಟೆ ಹಾಗೂ ಇಲ್ಲಿನ ಜನರ ನಾಶಕ್ಕೆ ಕಾರಣವಾಗುತ್ತದೆ.ಎಂದಾಗಿತ್ತು. ರಾಜ ಆ ಷರತ್ತನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಾನೆ ಮತ್ತು ಆ ಕೋಟೆಯ ಕೆಲಸವನ್ನು ಪ್ರಾರಂಭ ಮಾಡುತ್ತಾನೆ. ಹಾಗೆ ವರ್ಷಗಳು ಉರುಳಿತು.ಆ ಸನ್ಯಾಸಿ ಸಾಯುತ್ತಾನೆ ಮತ್ತು ಅಲ್ಲಿ ಅವನ ಸಮಾಧಿ ನಿರ್ಮಿಸುತ್ತಾರೆ. ಕೋಟೆಯ ನಿರ್ಮಾಣದ ಗಡಿಬಿಡಿಯಲ್ಲಿ ಸನ್ಯಾಸಿಯ ಮಾತುಗಳನ್ನು ಆ ರಾಜ ಮರೆತು ಬಿಡುತ್ತಾನೆ. A ಕೋಟೆಯು ಎತ್ತರವಾಗಿ ನಿರ್ಮಾಣ ಮಾಡುತ್ತಿದ್ದ. ಎಷ್ಟೆಂದರೆ ಕೊನೆಗೆ ಅದರ ನೆರಳು ಆ ಸನ್ಯಾಸಿಯ ಸಮಾಧಿಯನ್ನು ಸಂಪೂರ್ಣವಾಗಿ ಮುಚ್ಚುವಶ್ಟು ಎತ್ತರಕ್ಕೆ ಕೋಟೆಯನ್ನು ನಿರ್ಮಿಸಿದ. ತದನಂತರ ಆ ಕೋಟೆ ನಾಶದೆಡೆಗೆ ಸಂಚರಿಸಿತು . ಅಲ್ಲಿನ ಜನರೆಲ್ಲರೂ ಮರಣದ ನಂತರ ಪುನರ್ಜನ್ಮ ಇಲ್ಲದ ಅಥ್ಮಗಳಾಗಿ ಅಲ್ಲೇ ಅಲೆಯುತ್ತಿದ್ದಾರೆ.


Dangerous of Bhangarh fort

           ಇದು ನೂರಾರು ವರ್ಷ ಹಿಂದಿ ಕಥೆಯಾಗಿದ್ದರೂ ಕೂಡ ಬಾಂಗಾರ್ ಕೋಟೆಯ ಬಗ್ಗೆ ಇರುವ ಪ್ರೇತ ಕಥೆಗಳು ಈಗಲೂ ಮೌಲ್ಯವನ್ನು ಪಡೆಯುತ್ತಿದೆ. ಅದನ್ನು ಹೆಚ್ಚಿಸುವಂತೆ Archiolagical survay of india aa ಕೋಟೆಯ ಮುಂಭಾಗದಲ್ಲಿ ಒಂದು ಫಲಕವನ್ನು(board)  ಇಡುತ್ತಾರೆ. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೆ ಯಾರೂ ಕೂಡ ಈ ಕೋಟೆಯ ಒಳಗೆ ಪ್ರವೇಶಿಸಬಾರದು ಎಂದು. ಅದರಿಂದಲೇ 6 ಗಂಟೆಯ ನಂತರ ಆ ಕೋಟೆಯ ಒಳಗೆ ಯಾರಾದರೂ ಇದ್ದರೆ ಅಲ್ಲಿನ ಕಾವಲುಗಾರ ಎಲ್ಲರನ್ನೂ ಹೊರಗೆ ಕಳುಹಿಸಿ ಆ ಕೋಟೆಯ ಮುಖ್ಯ ದ್ವಾರವನ್ನು ಮುಚ್ಚಿ ಆದಷ್ಟು ಬೇಗ ಅಲ್ಲಿಂದ ಸ್ಥಳ ಕಾಳಿ ಮಾಡುತ್ತಾನೆ. ಅದನ್ನು ಬಿಟ್ಟು ಯಾರಾದರೂ ರಾತ್ರಿ ಅಲ್ಲೇ ಇರುವುದಾಗಿ ಇದ್ದರೆ ಅನೇಕ ರೀತಿಯ ಅಮನುಷಿಕ ಅನುಭವಗಳನ್ನು ಆ ಕೋಟೆ ಅವರಿಗೆ ನೀಡುತ್ತದೆ. ಮೊದಲನೆಯದಾಗಿ ಯಾರೋ ನಮ್ಮನ್ನು ನೋಡುತ್ತಿದ್ದರೆ ಎಂಬಂತೆ ಅವರಿಗೆ ಭಾಸವಾಗುತ್ತದೆ. ಹಾಗೆ ಕತ್ತಲು ಹೆಚ್ಚಾದಂತೆ ಕೋಟೆಯ ಬೇರೆ ಬೇರೆ ಭಾಗಗಳಿಂದ ಅನೇಕ ಜನರ ಕೂಗು ಇವರಿಗೆ ಕೇಳಿಸುತ್ತದೆ. ಕೋಟೆಯ ಒಳಗೆ ರಾತ್ರಿ ನಿಲ್ಲಲೆಂದು ಪ್ರವೇಶಿಸಿದ  ಒಂದು ಕೂಟ ಜನರ ಅನುಭವ ಹೇಗಿತ್ತು. ಕೋಟೆಯ ಒಂದು ಕೋಣೆಯಿಂದ ಶಬ್ಧ ಕೇಳಿದಾಗ ಟಾರ್ಚ್ ಹಿಡಿದ ವ್ಯಕ್ತಿ ಅಲ್ಲಿ ತಿರುಗಿ ನೋಡಿದ. ಅಲ್ಲಿ ಅವನಿಗೆ ಕಂಡದ್ದು ಒಂದು ಆಶ್ಚರ್ಯವಾಗಿತ್ತು.10 ಅಡಿ ಅಗಲ ಇರುವ ಸ್ತ್ರೀ ಹಳೇ ಕಾಲದ ರಾಜಸ್ಥಾನ್ ವಸ್ತ್ರ ಧರಿಸಿ ಇವರನ್ನು ನೋಡಿ ಅಲ್ಲಿ ಕುಳಿತುಕೊಳ್ಳುವುದು ಆಗಿತ್ತು. ನೋಡಿದವರು ನೋಡದವರು ಎಲ್ಲರೂ ಅಲ್ಲಿಂದ ಜೀವ ರಕ್ಷಿಸಲು ಓಡುತ್ತಾರೆ. ಅದೇರೀತಿ ಕತ್ತಲಲ್ಲಿ ನಡೆಯಬೇಕಾದರೆ ಚೈನ್ ಶಬ್ದ ಬಹಳ ದೂರದಿಂದ ಹತ್ತಿರ ಬಂದಂತೆ ಕೇಳಿಸುತ್ತಿತ್ತು. ಒಂದು ನಿಮಿಷಕ್ಕೆ ಅದು ನಿಂತು ತಕ್ಷಣವೇ ತನ್ನ ಹಿಂದೆ ಆ ಶ್ಭ ಕೇಳಲು ಆರಂಭಿಸಿತು. ಒಬ್ಬ ವ್ಯಕ್ತಿ ಎಷ್ಟು ದೊಡ್ಡ ಧೈರ್ಯಶಾಲಿ ಆಗಿದ್ದರು ಕೂಡ ಆಲಿ ಆತನ ಧೈರ್ಯ ನೆಲಸಮ ಆಗುತ್ತದೆ.ಬಂಗರ್ ಕೋಟೆಯ ಬಗ್ಗೆ ತಿಳಿಯಲು ಬಂದವರಿಗೆ ಎಲ್ಲ ಒಂದೊಂದು ರೀತಿಯ ದುರಂತಗಳು ನಡೆಯಿತು. ಅಲ್ಲಿನ ಪ್ರೆತವನ್ನ ಓಡಿಸಲು ಅದಾನು ಬೀಳಿಸಲು ಒಬ್ಬ ಮಂತ್ರವಾದಿ ಆ ಕೋಟೆಯ ಸುತ್ತಲೂ ಹೋಮ ಮಾಡುತ್ತಿದ್ದ. ಆದರೆ ಒಂದು ದಿವಸ ಅವನು ಪ್ರತ್ಯಕ್ಷನಾಗುತ್ತಾನೆ. ಆದರೆ ಕೆಲವು ದಿವಸಗಳ ನಂತರ ಕೋಟೆಯ ಹತ್ತಿರದ ಕೊಳದಲ್ಲಿ ಆತನ ಶವ ಶರೀರ ಸಿಗುತ್ತದೆ.

     ಭಾಂಗಾರ್ ಕೋಟೆಯ ಒಳಗೆ ಇರುವಂತಹ ಸಾಹಸವನ್ನು ಕೊನೆಯ ಬಾರಿ ಮಾಡಿದ್ದು  ಇಂಡಿಯನ್ ಪರನೋರ್ಮಲ್ ಸೊಸೈಟಿ ಯ ನಿರ್ಮಾಪಕನಾದ ಗೌರವ್ ತಿವಾರಿ ಎಂಬ ಯುವಕ. ಯಾವುದೇ ತೊಂದರೆ ಇಲ್ಲದೆ ಆತನು ಅಲ್ಲಿ ಒಂದು ರಾತ್ರಿ ಇದ್ದು ಬರುತ್ತಾನೆ . ಆದರೆ ಕೆಲವು ದಿವಸಗಳ ಬಳಿಕ ಆತನನ್ನು ಕಂಡದ್ದು ತನ್ನ ಬಾತ್ರೂಮಿನಲ್ಲಿ ರಕ್ತ ವಾಂತಿಮಾಡಿ ಸಾವನ್ನಪ್ಪಿದ ರೀತಿಯಲ್ಲಾಗಿತ್ತು. ಆತನನ್ನು ನಿಷೇಧಿಸುವುದು ಭಾಂಗರ್ ಕೋಟೆಯ ಕೊನೆಯ ಬಲಿ ಎಂದಾಗುತ್ತದೆ.

CONCLUSION

       ಇಷ್ಟೆಲ್ಲಾ ಕೇಳಿದ ಬಳಿಕ ನಿಮಗೆ ಏನು ಅನ್ನಿಸುತ್ತದೆ. ಅಲ್ಲಿ ನಿಜವಾಗಿಯೂ ಪೀತತ್ಮಗಳು ಕೋಟೆಯ ಒಳಗೆ ಮರುಜನ್ಮ ಇಲ್ಲದೆ ಅಳೆಯುತ್ತಿದ್ದವಾ ಅಥವಾ ಪ್ರೇತಾತ್ಮ ಇದೆ ಎನ್ನುವ ಸ್ಥಳದಲ್ಲಿ ಒಬ್ಬಂಟಿಯಾಗಿ ಇದ್ದಿದ್ದಕ್ಕೆ ಅವರಿಗೆ ಆ ರೀತಿ ಅನ್ನಿಸಿದ್ದು ಮಾತ್ರವಾ. ನಿಮ್ಮ ಅಭಿಪ್ರಾಯವನ್ನು comment box ನಲ್ಲಿ ತಿಳಿಸಿ.


ಧನ್ಯವಾದಗಳು.


Comments

Popular posts from this blog

THE SURVIVAL STOR JULIANE KOEPCKE ||10000 ಅಡಿ ಮೇಲಿನಿಂದ ಬಿದ್ದು ಬ್ದುಕಿ ಉಳಿದ ಹೆಣ್ಣು.

Story of Juliane koepcke ಯಾರಾದರೂ ವಿಮಾನದಿಂದ ಪ್ಯಾರಶೂಟ್ ಇಲ್ಲದೆ ಹಾರಿದರೆ ಅವರು ಸಾಯುವುದು ನಿಸ್ಸಂಶಯ. ಆದರೆ ಹಾರಾಡುತ್ತಿರುವ ವಿಮಾನದಿಂದ 10000 ಅಡಿ ಎತ್ತರದಿಂದ ಅಮೆಜಾನ್ ಕಾಡಿನ ಒಳಗೆ ಬಿದ್ದು ಅಲ್ಲಿನ ವನ್ಯ ಜೀವಿಗಳ ಎಡೆಯಿಂದ ಬದುಕಿಬಂದ ಕ್ಲಿಯರ್ ಆಗಿ ಹೇಳ್ಬೇಕು ಅಂದ್ರೆ ಸಾವನ್ನೇ ಜೈಸಿ ಬಂದ ಕೇವಲ 17 ವರ್ಷ ಪ್ರಾಯ ಇರುವ juliane koepcke ಎಂಬ ಹುಡುಗಿಯ ಅತಿಸಾಹಸ ಕಥೆಯನ್ನಾಗಿದೆ ಇಂದು ಇಲ್ಲಿ ತಿಲಿಸಲಿರುವುದು.ಬಹಳ ಆಸಕ್ತಿಕರವಾಗಿದೆ . ಪೂರ್ತಿಯಾಗಿ ಓದಿ. ‌1971 ಡಿಸೆಂಬರ್ 24 ರಂದು ತನ್ನ ಹೈಸ್ಕೂಲ್ ವಿದ್ಯಬ್ಯಾಸ ಮುಗಿಸಿ ತನ್ನ ತಾಯಿಯ ಜೊತೆ ಪೆರುವಿನ ಲಿಮ ಎಂಬ ಸ್ಥಳದಿಂದ ತನ್ನ ತಂದೆಯ ಬಳಿ ಯಾತ್ರೆ ಮಾಡುವುದಾಗಿತ್ತು juliane koepcke ಎಂಬ 17 ವರ್ಷ ಪ್ರಾಯದ ಹೆಣ್ಣು. ಅವರು ಆರಿಸಿದ ಏರ್ಲೈನ್ಸ್ ಅಂದರೆ ವಿಮಾನಕ್ಕೆ ಹಲವಾರು ಅಪಗಾತಗಳಾಗಿತ್ತು.ಆದರಿಂದಲೆ ಅವಳ ತಂಡ ತಾಯಿಯಲ್ಲಿ ಮುನ್ನೆಚ್ಚರಿಕೆ ನೀಡಿದ್ದರು.ಯಾವುದೇ ಕಾರಣಕ್ಕೂ ಆ ವಿಮಾನದಲ್ಲಿ ticket ತೆಗೆದುಕೊಳ್ಳಬೇಡಿ ಎಂದು.ಆದರೆ ಆ ಹೊತ್ತಿಗೆ ಆಗಲೇ ಟಿಕೆಟ್ ತೇಕೊಂಡಗಿತ್ತು. ‌ ಅವರುಹೇಳಿದ ಸಮಯಕ್ಕಿಂತ ಬಹಳಷ್ಟು ಲೇಟ್ ಆಗಿತ್ತು ವಿಮಾನ ಟೇಕಾಫ್ ಆಗುವಾಗ.ಅದಕ್ಕಿರುವ ಮುಖ್ಯ ಕಾರಣ ಆ ಸಮಯದ ಕಾಲವಸ್ಥೆಯಾಗಿತ್ತು.ಅಂದು ಜೋರಾದ ಮಳೆ ಜೊತೆಗೆ ಸಿಡಿಲು ಮಿಂಚು ಕೂಡ ಇತ್ತು.ಹೇಗೋ ವಿಮಾನ ಹಾರಾಡಲು ಪ್ರಾರಂಭಿಸುತ್ತದೆ.ಅಲ್ಪ ಸಮಯದ ಬಳಿಕ ವಿಮಾನ ಅಲುಗಾಡುತ್ತದೆ.ಶೆಲ್ಫ್...

PYRAMID EXPLAINED|| ಮಂಗಳ ಗ್ರಹದಲ್ಲಿ ಏಲಿಯೆನ್ಸ್‌ನ ಸ್ವಂತ ಪಿರಮಿಡ್‌ಗಳು

 ನೂರಾರು ವರ್ಷಗಳ ಕಾಲ ಮಾತ್ರ ಮಾಡಿದರೆ ಪೂರ್ತಿಯಾಗುವ ಆ ಕಟ್ಟಡವನ್ನು ಅವರು ನಿರ್ಮಿಸಿದ್ದು ಕೇವಲ 15 ವರ್ಷಗಳಲ್ಲಿ ಆಗಿತ್ತು. ಹೆಗೆಯಾಗಿರಬಹುದು ಅವರು ಅದನ್ನು ನಿರ್ಮಿಸಿದ್ದು?.ಯಾಕಾಗಿರಬಹುದು ಅವರು ಅದನ್ನು ನಿರ್ಮಿಸಿದ್ದು?.ಭೂಮಿ ಬಿಟ್ಟು ಹೊರಗಿನ ಯಾರದಾದರೂ ಸಹಾಯ ಅವರಿಗೆ ಲಭಿಸಿರಬಹುದೇ?. ಅದೇ ನಾನು ಇಂದು ನಿಮಗೆ ತಿಲಿಸಲಿರುವುದು ಪಿರಮಿಡ್ ಗಳ ನಿಗೂಡತೆ ಬಗ್ಗೆ‼️..... ಯಾವಾಗಲೂ ಒಂದು ಅದ್ಭುತವಾಗಿದೆ ಈ ಪಿರಮಿಡ್ ಅನ್ನುವುದು.3 ರಿಂದ 5 ಟನ್ ಭಾರ ಇರುವ 25ಲಕ್ಷ ಕಲ್ಲುಗಳನ್ನು ಉಪಯೋಗಿಸಿ ಪಿರಮಿಡ್ ಗಾಳನ್ನು ನಿರ್ಮಿಸಲಾಗಿದೆ.ಆ ಕಾಲದ ತಂತ್ರಜ್ಞಾನ ಮತ್ತು ಅಂದಿನ ಜನಸಂಖ್ಯೆ ನೋಡುವ ಸಂದರ್ಭದಲ್ಲಿ ಕಡಿಮೆ ಅಂದರೆ 625ವರ್ಷ ಹಿಡಿಸುತ್ತದೆ ಒಂದು ಪಿರಮಿಡ್ ನಿರ್ಮಿಸಲು.ಆದರೆ ಈಜಿಪ್ಟ್ ನ ಜನ ಪಿರಮಿಡ್ ಅನ್ನು ನಿರ್ಮಿಸಿದ್ದು ಕೇವಲ 15 ವರ್ಷಗಳಲ್ಲಿ ಆಗಿತ್ತು.5000 ವರ್ಷಗಳ ಹಿಂದಿನಿಂದ ಆಗಿರುತ್ತದೆ ಪಿರಮಿಡ್ ಗಳ ಕಥೆ ಪ್ರಾರಂಭ.ನಾವು 6000 ವರ್ಷಗಳ ಹಿಂದಿನಿಂದಲೇ ಪ್ರಾರಂಭ ಮಾಡೋಣ.ಆ ಒಂದು ಸಮಯದಲ್ಲಿ ಮನುಷ್ಯರು ಗುಂಪಾಗಿ ಬದುಕಲು ಪ್ರಾರಂಭಿಸಿದ ಕಾಲ ಆಗಿರುವುದರಿಂದ ಅವರ ಎಡೆಯಲ್ಲಿ ವಿಶ್ವಾಸ, ಮತ, ದೇವರು, ಏನು ಇರಲಿಲ್ಲ. ಅವರಲ್ಲಿ ಇದ್ದದ್ದು ಬೇರೆ ಬೇರೆ ರೀತಿಯ ರೋಗಗಳು ಆಗಿತ್ತು. ತುಂಬಾ ರೋಗ ಇತ್ತು ಎನ್ನುವ ಕಾರಣದಿಂದಲೇ ಆ ಕಾಲದಲ್ಲಿ ಬದುಕಿದ್ದ ಜನರ ಸರಾಸರಿ ಆಯಸ್ಸು ಅನ್ನುವುದು 40 ವರ್ಷ ಮಾತ್ರವಾಗಿತ್ತು. ಈ ಒಂದು ಪ್ರಾಯ ಆ...

4 - Zero investment business ideas

  Small business ideas for biginners in lockdown ನೀವು ಈ ನಾಣ್ಣುಡಿಯನ್ನು ಕೇಳಿರಬಹುದು." ಮನುಷ್ಯ ಹೇಳ್ತಾನೆ ಹಣ ಬಂದ್ರೆ ನಾನು ಏನಾದ್ರೂ ಮಾಡಬಹುದು ,ಹಣ ಹೇಳ್ತದೆ ನೀನು ಏನಾದ್ರೂ ಮಾಡು  ನಾನು ಬರುತ್ತೇನೆ"ಆದರೆ ಹಣ ಸಂಪಾದಿಸಲು ಸ್ವಲ್ಪ ಹಣ ಬೇಕು. ಆಗಾಗ್ಗೆ ಬಂಡವಾಳ ಇಲ್ಲದ ಕಾರಣ ಅನೇಕ ವ್ಯವಹಾರ ವಿಚಾರಗಳನ್ನು ಕೈಬಿಡಲಾಗುತ್ತದೆ.ಆದರೆ ಒಂದು ಉತ್ತಮ businessman ಯಾವತ್ತೂ ತನ್ನ ಕನಸುಗಳನ್ನು ಒಡೆಯಲು ಬಿಡುವುದಿಲ್ಲ.ಮತ್ತು business ಬಗ್ಗೆ ಮಾತನಾಡುವಾಗ ಈಗಿನ ಯುವ ಪರಂಪರೆ ಯೋಚನೆ ಮಾಡುವುದೆಂದರೆ zero investment ನಿಂದ ಪ್ರಾರಂಭಿಸುವ business ಯಾವುದಾದರೂ ಇದೆಯಾ? ಎಂದು. ಇದರ ಉತ್ತರ ಹೌದು. ನೀವು ಸ್ವಲ್ಪ research ಮಾಡಿದರೆ ಮನೆಯಲ್ಲೇ ಕೂತು zero investment ನಿಂದ ಪ್ರಾರಂಭಿಸಿ ಹಣ ಸಂಪಾದಿಸಬಹುದಾದ ಅನೇಕ ದಾರಿಗಳಿವೆ.ಇಂದು ನಾವು ಆ ಥರದ ಕೆಲವು ಬ್ಯುಸಿನೆಸ್ ಬಗ್ಗೆ ತಿಳಿಯೋಣ. ಅದಕ್ಕಿಂತ ಮೊದಲು ಎಲ್ಲಾ ಫೀಲ್ಡ್ ನಲ್ಲು ಉಪಯೋಗವಾಗುವ ಕೆಲವು ಬ್ಯುಸಿನೆಸ್ basic rouls ಬಗ್ಗೆ ತಿಳಿಯೋಣ. Basic Business Rouls 1.time is money ಹೌದು ನಮಿಗೆ ಎಲ್ಲರಿಗೂ ತಿಳಿದ ಹಾಗೆ ಸಮಯವನ್ನು ಹಣ ಕೊಟ್ಟು ಖರೀದಿಸಲು ಆಗುವುದಿಲ್ಲ.ಈಗಿನ ಕಾಲದಲ್ಲಿ ಯಾರಲ್ಲಾದರೂ ಸ್ವಲ್ಪ ಸಮಯ ಇದ್ಯಾ ಎಂದು ಕೇಳಿದರೆ ಅವರು ಹೇಳುವುದು ನಾನು ಇವತ್ತು ತುಂಬಾ buzy , ನನ್ನ ಹತ್ತಿರ ಸಮಯವಿಲ್ಲ ಎಂದು. ನಮಿಗೆ ಗೊತ್ತು ನಮ್...